ಮಂಗಳೂರು: ಮಂಗಳೂರಿನ ಖಾತ ಬಿಲ್ಡರ್ ಒಬ್ಬರು ಬಹುಮಹಡಿ ಕಟ್ಟಡದ 17 ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಡೆದಿದೆ.
ಮೋಹನ್ ಅಮೀನ್ ಎಂಬವರು ಆತ್ಮಹತ್ಯೆ ಮಾಡಿಕೊಂಡಿರುವ ಉದ್ಯಮಿಯಾಗಿದ್ದಾರೆ. ಅವರು ಭಾನುವಾರ ಮುಂಜಾನೆ ಮಂಗಳೂರಿನ ಬೆಂದೂರುವೆಲ್ ನಲ್ಲಿರುವ ಅಟ್ಲಾಂಟಿಕ್ ಅಪಾರ್ಟ್ ಮೆಂಟ್ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೋಹನ್ ಅಮೀನ್ ಮಂಗಳೂರಿನಲ್ಲಿ ಹಲವು ಅಪಾರ್ಟ್ ಮೆಂಟ್ ಗಳನ್ನು ನಿರ್ಮಿಸಿದ್ದರು. ಇದೀಗ ಏಕಾಏಕಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೋಹನ್ ಅಮೀನ್ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪೊಲೀಸರು ಮೋಹನ್ ಅಮೀನ್ ಆತ್ಮಹತ್ಯೆಗೆ ನಿಖರ ಕಾರಣ ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ.