ಸುಳ್ಯ: ನಾಪತ್ತೆಯಾಗಿದ್ದ ಬಾಲಕ ಮೈಸೂರಿನಲ್ಲಿ ಪತ್ತೆ

Share with

ಸುಳ್ಯ: ಎರಡು ದಿನಗಳ ಹಿಂದೆ ಅಂಗಡಿಗೆ ತೆರಳುವುದಾಗಿ ತೆರಳಿ ನಂತರ ನಾಪತ್ತೆಯಾಗಿದ್ದ ಎಂಟನೇ ತರಗತಿಯ ವಿದ್ಯಾರ್ಥಿ ಅಬೂಬಕ್ಕರ್ ಅಬೀಲ್ ನ.18ರಂದು ಮೈಸೂರಿನಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.

ನಾಪತ್ತೆಯಾಗಿದ್ದ ಎಂಟನೇ ತರಗತಿಯ ವಿದ್ಯಾರ್ಥಿ ಅಬೂಬಕ್ಕರ್ ಅಬೀಲ್.

ಪೆರುವಾಜೆ ಗ್ರಾಮದ ಕುಂಡಡ್ಕ ನಿವಾಸಿ ಹನೀಪ್ ಇಂದ್ರಾಜೆ ಅವರ ಪುತ್ರ, ತಲಪಾಡಿ ಬಿಲಾಲ್ ಮಸೀದಿಯ ವಿದ್ಯಾರ್ಥಿ ಅಬೂಬಕ್ಕರ್ ಅಬೀಲ್ ಎಂಬ ಬಾಲಕ ನ.16ರಂದು ನಾಪತ್ತೆಯಾಗಿದ್ದ. ಎಂಟನೇ ತರಗತಿಯ ವಿದ್ಯಾರ್ಥಿ ಆಗಿರುವ ಈತ ನ.16ರಂದು ಸಂಜೆ ಶಾಲೆಯಿಂದ ಮಸೀದಿಗೆ ಬಂದಿದ್ದು ಅಲ್ಲಿ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋದವನು ಮರಳಿ ಬಂದಿಲ್ಲ.

ಈ ಬಗ್ಗೆ ಪೋಷಕರು ಉಳ್ಳಾಲ ಠಾಣೆಯಲ್ಲಿ ದೂರು ನೀಡಿದ್ದು ಹುಡುಕಾಟ ನಡೆಸುತ್ತಿದ್ದರು. ನ.18ರಂದು ಸಂಜೆ ಮೈಸೂರು ಝೂ ಸಮೀಪ ಪತ್ತೆಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ.


Share with

Leave a Reply

Your email address will not be published. Required fields are marked *