ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್‌ಗೆ ಕೋರ್ಟ್ ಗುಡ್‌ನ್ಯೂಸ್ ನೀಡಿದೆ. ದೆಹಲಿ ಹೈಕೋರ್ಟ್‌ನಿಂದ ವ್ಯಕ್ತಿತ್ವ ಹಕ್ಕುಗಳನ್ನು ಪಡೆದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಗವಾಸ್ಕರ್ ಪಾತ್ರರಾಗಿದ್ದಾರೆ. ಇನ್ನು ಮುಂದೆ ಅನುಮತಿಯಿಲ್ಲದೆ ಗವಾಸ್ಕರ್ ಅವರ ಹೆಸರು, ಫೋಟೋಗಳು ಮತ್ತು ಧ್ವನಿಯನ್ನು ಬಳಸಬಾರದು ಎಂದು ಕೋರ್ಟ್ ಹೇಳಿದೆ. ಇದುವರೆಗೂ ಪೋಸ್ಟ್ ಮಾಡಲಾಗಿರುವ ಅನಧಿಕೃತ ಪೋಸ್ಟ್‌ಗಳು ಮತ್ತು ವೀಡಿಯೊಗಳನ್ನು 72 ಗಂಟೆಗಳ ಒಳಗೆ ತೆಗೆದುಹಾಕಬೇಕೆಂದು ನ್ಯಾಯಾಲಯ ಆದೇಶಿಸಿದೆ.

ಏನಿದು ಘಟನೆ?:
ಮಾಜಿ ಕ್ರಿಕೆಟಿಗ ಸುನಿಲ್ ಗಾವಸ್ಕರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೆಸರು, ಚಿತ್ರಗಳು ದುರುಪಯೋಗದ ವಿರುದ್ಧ ವ್ಯಕ್ತಿತ್ವ ಹಕ್ಕು ರಕ್ಷಣೆ ಕೋರಿ ದಿಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ.ಮಲ್ಮೀತ್ ಪ್ರೀತಮ್ ಸಿಂಗ್ ಅರೋರಾ, ಮುಂದಿನ 7 ದಿನಗಳಲ್ಲಿ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಮಾಧ್ಯಮಗಳಿಗೆ ನಿರ್ದೇಶನ ನೀಡಿದ್ದರು. ಇದೀಗ ದೆಹಲಿ ಹೈಕೋರ್ಟ್‌ನಿಂದ ವ್ಯಕ್ತಿತ್ವ ಹಕ್ಕುಗಳನ್ನು ಪಡೆದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಗವಾಸ್ಕರ್ ಪಾತ್ರರಾಗಿದ್ದಾರೆ.




