ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಿ, ದುಶ್ಚಟಕ್ಕೆ ಬಲಿಯಾಗದಂತೆ ನೋಡಿಕೊಳ್ಳಿ, ನಮ್ಮ ನಮ್ಮ ಮನೆ ಪರಿಸರ ಸ್ವಚ್ಛತೆಯನ್ನು ಕಾಪಾಡಿ ಪರಿಸರವನ್ನು ಉಳಿಸುವತ್ತ ಗಮನ ಕೊಡಿ ಎಂದು ಮಾಜಿ ಶಾಸಕ ರುಕ್ಮಯ ಪೂಜಾರಿ ಏಳ್ತಿಮಾರ್ ರವರು ಹೇಳಿದರು. ಅವರು ಬಂಟ್ವಾಳ ತಾಲೂಕಿನ ಸುರಕ್ಷಾ ಸಂಗಮ(ರಿ ) ಪುರ್ಲಿಪಾಡಿ, ಕಲ್ಲಡ್ಕ ಇದರ ಆಶ್ರಯದಲ್ಲಿ ಕಲ್ಲಡ್ಕ ಮರಾಠಿ ಭವನ ದಲ್ಲಿ ಜರಗಿದ “ಸುರಕ್ಷಾ ಗೌಜಿ ಗಮ್ಮತ್- 2024” ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾಂಪ್ರಬೈಲು ದೇವಸ್ಥಾನದ ಅಣ್ಣಪ್ಪ ಪಂಜುರ್ಲಿ ದೈವದ ಚಾಕಿರಿಧಾರರಾಗಿ ಸೇವೆ ಸಲ್ಲಿಸುತ್ತಿರುವ ಕೃಷ್ಣಪ್ಪ ಪೂಜಾರಿ ಕುದ್ರೆಬೆಟ್ಟು ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಈ ವರ್ಷದ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದ ಸ್ಥಳೀಯ ಮೂವರು ವಿದ್ಯಾರ್ಥಿಗಳಾದ ಯತೀಶ್ ಕುಮಾರ್, ನಿಶಾ, ಸಂಪತ್ ಕುಮಾರ್ ಇವರನ್ನು ಅಭಿನಂದಿಸಿ ಗೌರವಿಸಲಾಯಿತು. ಸ್ಥಳೀಯ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಬೆಳಿಗ್ಗೆಯಿಂದ ಸಂಜೆಯ ತನಕ ವಿವಿಧ ರೀತಿಯ ಒಳಾಂಗಣ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ವಿವಿದ ರೀತಿಯ ಪಾನಿಯ, ತಿಂಡಿ ತಿನಸುಗಳು, ಚಾ,ಕಾಪಿ ತಿಂಡಿ, ಸಸ್ಯಹಾರಿ ಮಾಂಸಾಹಾರಿ ಊಟ, ವ್ಯವಸ್ಥೆಯನ್ನು ಉಚಿತವಾಗಿ ಆಯೋಜಕರು ಮಾಡಿದ್ದು ಕಾರ್ಯಕ್ರಮ ಒಂದು ಜಾತ್ರೆ ತರಹ ಕಂಡು ಬಂತು. ಕಾರ್ಯಕ್ರಮದ ವೇದಿಕೆಯಲ್ಲಿ ಬಾಳ್ತಿಲ ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷ ಪ್ರಸ್ತುತ ಸದಸ್ಯ ಆಗಿರುವ ಹಿರಣ್ಮಯೀ , ಕನ್ಯಾಡಿ ಶ್ರೀರಾಮ ಮಂದಿರದ ಸಂಚಾಲಕ ಕೃಷ್ಣಪ್ಪ ಪೂಜಾರಿ ತೋಟ, ಬಿಜೆಪಿ ಬಂಟ್ವಾಳ ಕ್ಷೇತ್ರ ಅಧ್ಯಕ್ಷ ಚೆನ್ನಪ್ಪ ಆರ್ ಕೋಟ್ಯಾನ್, ಕೆ ಎನ್ ಬೇಕರಿ ಮಾಲಕ ನವಾಜ್, ವೆಂಕಟರಾಯ ಪ್ರಭು ,ಸಂಘದ ಉಪಾಧ್ಯಕ್ಷರಾದ ಜಯಪ್ರಶಾಂತ್, ಕಾರ್ಯದರ್ಶಿ ವಿಕೇಶ್ ತೋಟ ಮೊದಲಾದವರು ಉಪಸ್ಥಿತರಿದ್ದರು. ಸುರಕ್ಷಾ ಸಂಗಮ(ರಿ ) ಪುರ್ಲಿಪಾಡಿ ಇದರ ಅಧ್ಯಕ್ಷ ನಿತಿನ್ ಸ್ವಾಗತಿಸಿ, ಯೋಗೀಶ್ ತೋಟ ವಂದಿಸಿ, ಯತಿನ್ ಕುಮಾರ್ ಏಳ್ತಿಮಾರ್ ಕಾರ್ಯಕ್ರಮ ನಿರೂಪಿಸಿದರು.