ಪೈವಳಿಕೆ, ಮೀಂಜಾ ಪಂಚಾಯತ್ ಸಂಪರ್ಕಿಸುವ ತೂಗು ಸೇತುವೆ ತುಕ್ಕುಹಿಡಿದು ಶೋಚನೀಯ  ಸಂಚಾರಕ್ಕೆ  ಆತಂಕ

Share with

ಪೈವಳಿಕೆ: ಪೈವಳಿಕೆ ಹಾಗೂ ಮೀಂಜಾ ಪಂಚಾಯತ್ ಸಂಪರ್ಕಿಸುವ ಪಳ್ಳತ್ತಡ್ಕದಲ್ಲಿರುವ ತೂಗು ಸೇತುವೆ ತುಕ್ಕು ಹಿಡಿದು ಅಪಾಯದಂಚಿನಲ್ಲಿದ್ದು, ಸಂಚಾರಕ್ಕೆ ಭೀತಿ ಸೃಷ್ತಿಯಾಗಿದೆ. ಈ ತೂಗು ಸೇತುವೆಯನ್ನು  ನವೀಕರಿಸಬೇಕೆಂದು ಊರವರು ಒತ್ತಾಯಿಸಿದ್ದಾರೆ. ೨೦೦೮ರಲ್ಲಿ ಜಿಲ್ಲಾ ಪಂಚಾಯತ್, ಬ್ಲೋಕ್ ಪಂಚಾಯತ್, ಮೀಂಜಾ ಪಂಚಾಯತ್, ಸಂಸದ, ಶಾಸಕರ ನಿಧಿಯಿಂದ ಜಂಟಿಯಾಗಿ ಸುಮಾರು ೧೬ಲಕ್ಷರೂ ವಚ್ಚದಲ್ಲಿ ೬೫ ಮೀಟರ್ ಉದ್ದದ  ಉಪ್ಪಳ ಹೊಳೆಯ ಪಳ್ಳತಡ್ಕ ಎಂಬಲ್ಲಿ ಈ ತೂಗು ಸೇತುವೆಯನ್ನು ನಿರ್ಮಿಸಲಾಗಿದೆ. ಪೈವಳಿಕೆ ಹಾಗೂ ಮೀಂಜಾ ಪಂಚಾಯತ್ ಸೇರಿ ಕೊಂಡಿರುವ ಮುದ್ದನಡ್ಕ, ದರ್ಭೆ, ಕೊಳಚಪ್ಪು ಸಹಿತ ಕೊಮ್ಮಂಗಳ ಪರಿಸರ ಸುಮಾರು ೭೫ ಕುಟುಂಬಗಳು ಶಾಲೆ, ಪಂಚಾಯತ್, ವಿಲೇಜ್ ಆಫೀಸ್, ಸಹಿತ  ವಿವಿಧ ಕೆಲಸ ಕಾರ್ಯಗಳಿಗೆ ಮೀಯಪದವುಗೆ ಅದೇ ರೀತಿ ಮೀಯಪದವು ಸಹಿತ ಪರಿಸರ ಪ್ರದೇಷಗಳಿಂದ ಕೊಮ್ಮಂಗಳ, ಮುದ್ದನಡ್ಕ ಸಹಿತ ವಿವಿಧ ಕಡೇಗೆ ತೆರಳಲು  ಈ ತೂಗು ಸೇತುವೆಯೇ ಆಶ್ರಯವಾಗಿರುವುದಾಗಿ ಊರವರು ತಿಳಿಸಿದ್ದಾರೆ. ತೂಗು ಸೇತುವೆ ನಿರ್ಮಿಸಿದ ಬಳಿಕ ಒಂದು ಬಾರಿ ನವೀಕರಿಸಲಾಗಿರುವುದಾಗಿ ಊರವರು ತಿಳಿಸಿದ್ದಾರೆ. ಆದರೆ ಇದೀಗ ಈ ಸೇತುವೆಯ ಕಬ್ಬಿಣ ಪೂರ್ತಿ ತುಕ್ಕು ಹಿಡಿದಿದ್ದು, ಸಂಚಾರಕ್ಕೆ ಆತಂಕ ಉಂಟಾಗಿದೆ.  ಸಂಬoಧಪಟ್ಟ  ಅಧಿಕಾರಿಗಳು ಇದನ್ನು ಕೂಡಲೇ ನವೀಕರಣಗೊಳಿಸಬೇಕೆಂದು ಊರವರು ಒತ್ತಾಯಯಿಸಿದ್ದಾರೆ.


Share with

Leave a Reply

Your email address will not be published. Required fields are marked *