ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಗ್ಗ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ವಗ್ಗ ಪ್ರೌಢ ಶಾಲೆಯಲ್ಲಿ ಸ್ವಚ್ಛತಾ ಶ್ರಮಧಾನ ಕಾರ್ಯಕ್ರಮ ಜರಗಿತು.
ಶೌರ್ಯ ತಂಡದ ಸದಸ್ಯರು ಶಾಲೆಯ ಆವರಣದ ಸುತ್ತಲೂ ಮರ ಹುಲ್ಲು ಗಿಡ ಕಡ್ಡಿಗಳನ್ನು ಸ್ವಚ್ಛಗೊಳಿಸಿದರು.
ಈ ಶ್ರಮದಾನ ಕಾರ್ಯದಲ್ಲಿ ಶೌರ್ಯ ಘಟಕದ ಅಧ್ಯಕ್ಷ ಪ್ರವೀಣ, ಸದಸ್ಯರುಗಳಾದ ಸಂಪತ್ ಶೆಟ್ಟಿ,, ಮಹಾಬಲ ರೈ ,ಅಶೋಕ ಹಾರೊದ್ದು, ಶಶಿಕಲಾ ,ಮೋಹನಂದ, ಕೀರ್ತಿರಾಜ್ , ನಾರಾಯಣ್ ಶೆಟ್ಟಿ, ಆನಂದ, ಪ್ರಮೀಳ, ಪವಿತ್ರ ಅಶೋಕ ಬೊಲ್ಮಾರು, ವಿನೋದ್, ನಾರಾಯಣ ಪೂಜಾರಿ, ರಮೇಶ, ಪ್ರಿಯಾಂಕ , ಜನಾರ್ದನ, ಕಾವಳಪಡುರು ಗ್ರಾಮ ಪಂಚಾಯತ್ ಸದಸ್ಯರಾದ ವೀರೇಂದ್ರ ಅಮೀನ್, ಯೋಜನೆಯ ವಗ್ಗ ವಲಯ ಮೇಲ್ವಿಚಾರಕಿ ಸವಿತಾ,ಶೌರ್ಯ ಘಟಕದ ಸಂಯೋಜಕಿ ರೇಖಾ ಪಿ, ಸೇವಾ ಪ್ರತಿನಿಧಿ ರಜನಿ ಪಾಲ್ಗೊಂಡಿದ್ದರು.