ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ವಿಟ್ಲ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಮಾಸಾಚರಣೆ ಉದ್ಘಾಟನಾ ಕಾರ್ಯಕ್ರಮ

Share with

ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ರಿಜಿಸ್ಟರ್ಡ್ ವಿಟ್ಲ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಬಂಟ್ವಾಳ, ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ವಿಟ್ಲ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಮಾಸಾಚರಣೆ ಉದ್ಘಾಟನಾ ಕಾರ್ಯಕ್ರಮ
ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಟ್ಲ ಇಲ್ಲಿ ಜರಗಿತು.

ಕಾರ್ಯಕ್ರಮ ಉದ್ಘಾಟಿಸಿದ ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ  ರೊನಾಲ್ಡ ಡಿಸೋಜ ದುಶ್ಚಟಗಳಿಗಿಂತ ಮೊಬೈಲ್ ಬಳಕೆಯು ಅತ್ಯಂತ ಅಪಾಯಕಾರಿ. ವಿದ್ಯಾರ್ಥಿಗಳು ಅವಶ್ಯಕತೆಗೆ ತಕ್ಕಂತೆ ಮಿತ ಪ್ರಮಾಣದಲ್ಲಿ ಇದರ ಬಳಕೆ ಮಾಡಬೇಕೆಂದು ಎಂದು ಅಭಿಪ್ರಾಯಪಟ್ಟರು,

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಪ್ರೊಫೆಸರ್ ಪದ್ಮನಾಭ ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆಕಾಲೇಜು ವಿಟ್ಲ ಇವರು ವಹಿಸಿಕೊಂಡಿದ್ದರು.

ಸಂಪನ್ಮೂಲ ವ್ಯಕ್ತಿಗಳಾದ   ಅಖಿಲ ಕರ್ನಾಟಕ  ಜನಜಾಗೃತಿ ವೇದಿಕೆ ಟ್ರಸ್ಟ್ ರಿಜಿಸ್ಟರ್ ಬೆಳ್ತಂಗಡಿ ಇದರ ಪ್ರಾದೇಶಿಕ ನಿರ್ದೇಶಕರಾದ  ವಿವೇಕ್ ವಿನ್ಸೆಂಟ್ ಪಾಯಸ್  ಮಕ್ಕಳಿಗೆ ಡ್ರಗ್ಸ್ ಧೂಮಪಾನ ಮದ್ಯಪಾನ ಹಾಗೆ ಇತರ ಮಾದಕ ವಸ್ತುಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿ, ಮಕ್ಕಳು ಇದರ ಅಭ್ಯಾಸದಿಂದ ದೂರವಿರಬೇಕು  ತಿಳಿಸಿ, ಹಲವು ದುಷ್ಟತೆಗಳಿಂದ ಆಗಿರುವ ದುಷ್ಪರಿಣಾಮಗಳ  ಬಗ್ಗೆ ಉದಾಹರಣೆ ಸಹಿತ ವಿವರಿಸುತ್ತ ಮಕ್ಕಳಿಗೆ ಮನಮುಟ್ಟುವಂತೆ ಉತ್ತಮ ಮಾಹಿತಿಯನ್ನು ನೀಡಿದರು.

ಮುಖ್ಯ ಅತಿಥಿಯಾದ ಶ್ರೀ ಅಶ್ರಫ್ ವಿ ಕೆ ಎಂ ಕಾರ್ಯಾಧ್ಯಕ್ಷರು ಸರಕಾರಿ ಪ್ರಥಮ ದರ್ಜೆ ಕಾಲೇಜು ವಿಟ್ಲ ಇವರು ಮಕ್ಕಳಿಗೆ ಪಡೆದುಕೊಂಡ ಮಾಹಿತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ತಿಳಿಸಿದರು

ಕಾರ್ಯಕ್ರಮದಲ್ಲಿ ಕೃಷ್ಣಯ್ಯ ಬಳ್ಳಾಲ್ ವಲಯ ಅಧ್ಯಕ್ಷರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವಿಟ್ಲ, ನವೀನ್ ಚಂದ್ರ ಅಧ್ಯಕ್ಷರು ಕೇಂದ್ರ ಒಕ್ಕೂಟ ಪ್ರಗತಿ ಬಂಧು ಸ್ವಸಹಾಯ ಸಂಘ ವಿಟ್ಲ ತಾಲೂಕು,  ಪ್ರವೀಣ್ ಕುಮಾರ್ ಜಿಲ್ಲಾ ನಿರ್ದೇಶಕರು,ನಟೇಶ ವಿಟ್ಲ ಸದಸ್ಯರು ಅಖಿಲ ಕರ್ನಾಟಕ ಜನಜಾಗತಿ ವೇದಿಕೆ ವಿಟ್ಲ,  ಪ್ರಮೀಳಾ ವಲಯ ಅಧ್ಯಕ್ಷರು ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ವಿಟ್ಲ,  ವಿಶ್ವನಾಥ, ಶ್ರೀ ಹರೀಶ್,  ರಾಮನಾಥ, ಮಾಧವ. ಜನಜಾಗೃತಿ ವೇದಿಕೆ ಸದಸ್ಯರು  ಯೋಜನೆಯ  ಶೌರ್ಯ ವಿಪತ್ತು ಘಟಕದ ಸದಸ್ಯರು, ಸೇವಾ ಪ್ರತಿನಿಧಿಗಳು, ಶಾಲಾ ಉಪನ್ಯಾಸಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು

ಯೋಜನಾಧಿಕಾರಿ ರಮೇಶ ಸ್ವಾಗತಿಸಿ,ಕಾಲೇಜಿನ ಉಪನ್ಯಾಸಕಿ  ಶಶಿಕಲ ವಂದಿಸಿ,
  ವಲಯದ ಮೇಲ್ವಿಚಾರಕಿ ಸರಿತಾ ಕಾರ್ಯಕ್ರಮ ನಿರೂಪಿಸಿದರು.  .


Share with

Leave a Reply

Your email address will not be published. Required fields are marked *