ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಗುರುವಾ ಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ತಣ್ಣೀರು ಪಂಥ ವಲಯದ ಬಾರ್ಯ ಒಕ್ಕೂಟಗಳ ಪದಗ್ರಹಣ ಸಮಾರಂಭ ಶ್ರೀ ರಾಮಾಂಜನೇಯ ಬಜನಾ ಮಂದಿರದ ಸಬಾಭವನದಲ್ಲಿ ಜರಗಿತು ಬಾರ್ಯ
ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಅದ್ಯಕ್ಷರಾದ ಪ್ರವೀಣ್ ರೈ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತ ಜೀವನ ಪದ್ಧತಿ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವಲ್ಲಿ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆ ಯವರ ಸೇವೆ ಅನನ್ಯವಾಗಿದೆ ಅರ್ಥಿಕ ವಾಗಿ, ಸಾಮಾಜಿಕವಾಗಿ ಹಾಗು ಧಾರ್ಮಿಕವಾಗಿ ಯಾವ ರೀತಿಯಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದು ಎಂಬುದನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ತೋರಿಸಿ ಕೊಟ್ಟಿದ್ದಾರೆ ನಮ್ಮನ್ನ ನಾವು ನಿಯಮದೊಳಗೆ ಅಳವಡಿಸಿಕೊಂಡಾಗ ಸ್ವ ಸಹಾಯ ಸಂಘಗಳನ್ನೂ ಯಶಸ್ವಿಯಾಗಿ ನಿರ್ವಹಣೆ ಮಾಡಲು ಸಾಧ್ಯ ಅಗುತ್ತದೆ ಎಂದರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿವೃತ್ತ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಮಹಾವೀರ ಅಜ್ರಿಯವರು ಸಂಸ್ಥೆಯನ್ನು ಹುಟ್ಟು ಹಾಕುವುದು ಸುಲಭ ಅದನ್ನ ಉಳಿಸಿಕೊಳ್ಳುವುದು ಬಹಳ ಮುಖ್ಯ ಬೆಳ್ತಂಗಡಿ ತಾಲೂಕಿನ ಜನರ ಪೂರ್ಣ ಬೆಂಬಲ ಹಾಗೂ ಸಹಕಾರದಿಂದ ರಾಜ್ಯಾದ್ಯಂತ ಪೂಜ್ಯರು ಯೋಜನೆಯ ಕಾರ್ಯಕ್ರಮಗಳನ್ನ ವಿಸ್ತರಿಸಿದರು ಸಂಸ್ಥೆಯು ಬೃಹತ್ತ ಕಾರವಾಗಿ ಬೆಳೆದಿದೆ ಇದಕ್ಕೇ ಕಾರಣ ಬೆಳ್ತಂಗಡಿ ತಾಲೂಕಿನ ಜನರ ಸಹಕಾರ ಎಂದರು ಕೃಷಿ ಚಟುವಟಿಕೆ ಗಳಲ್ಲಿನ ಸಮಸ್ಯೆಗಳನ್ನ ಗಮನಿಸಿ ಕೃಷಿ ಅಬಿವೃದ್ಧಿ ಕಾರ್ಯಕ್ರಮಗಳಿಗೆ ಯೋಜನೆಯ ಮೂಲಕ ಉತ್ತೇಜನ ನೀಡಲಾಯಿತು ಪರಿಣಾಮ ರೈತರಲ್ಲಿ ಆದಾಯದ ಪ್ರಮಾಣ ಹೆಚ್ಚಾಯಿತು ಕೃಷಿಯಲ್ಲಿ ಸ್ವತಃ ತಾವೇ ತೊಡಗಿಕೊಂಡಾಗ ಲಾಭ ದಾಯಕವಾಗುತ್ತದೆ ಯುವ ಜನಾಂಗವನ್ನು ಕೃಷಿಯ ಕಡೆಗೆ ಸೆಳೆಯುವ ಕೆಲಸ ಮಾಡಬೇಕಾಗಿದೆ ಎಂದು ವಿವರಿಸಿದರು 76 ವರ್ಷದ ಇಳಿ ವಯಸ್ಸಿನಲ್ಲೂ ಪೂಜ್ಯರು ಯೋಜನೆಯ ಮೂಲಕ ಬಡವರ ಬದುಕಿನಲ್ಲಿ ಆಮೂಲಾಗ್ರ ಬದಲಾವಣೆ ತರಲು ಯಾವುದೇ ಪ್ರತೀ ಫಲಾಪೇಕ್ಷೆ ಇಲ್ಲದೇ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ ಅವಕಾಶಗಳನ್ನ ಸದುಪಯೋಗ ಪಡಿಸಿಕೊಂಡಗ ಅಭಿವೃದ್ದಿ ಹೊಂದಲು ಸಾಧ್ಯ ಅಗುತ್ತದೆ ಎಂದರು ವೇದಿಕೆಯಲ್ಲಿ ಶ್ರೀ ದೇವಿ ಪ್ರಸಾದ್ ಕಡಮ್ಮಜೆ ಪ್ರಗತಿ ಪರ ಕೃಷಿಕರು ಹಾಗೂ ಯುವ ಉದ್ಯಮಿ, ಶ್ರೀ ಗೋಪಾಲ ಕೃಷ್ಣ ಅದ್ಯಕ್ಷರು ಶ್ರೀ ರಾಮಾಂಜನೇಯ ಬಜನ ಮಂಡಳಿ ಪಿಲಿಗೂಡು, ಶ್ರೀ ಗುಣಾಕರ ಅಗ್ನಡಿ, ಮೋನಪ್ಪ ಗೌಡ ಪುತ್ತಿಲ ತಾಲೂಕ ಜನ ಜಾಗೃತಿ ವೇದಿಕೆ ಸದಸ್ಯರು, ಬಾರ್ಯ ಗ್ರಾಮ ಸಮಿತಿ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಶೆಟ್ಟಿ, ನೂತನ ಅಧ್ಯಕ್ಷರಾದ ಶ್ರೀ ಮೋಹನ ಗೌಡ , ತಾಲೂಕ್ ಯೋಜನಾಧಿಕಾರಿ ಶ್ರೀ ದಯಾನಂದ ಪೂಜಾರಿ ಉಪಸ್ಥಿತರಿದ್ದರು ಸಬಾ ಅಧ್ಯಕ್ಷತೆಯನ್ನು ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಬೆಳಿಯಪ್ಪ ಗೌಡ ವಹಿಸಿದ್ದರು ಸೇವಾಪ್ರತಿನಿಧಿ ವಿಶಾಲಾಕ್ಷಿ ವರದಿ ಮಂಡಿಸಿದರು, ವಲಯ ಮೇಲ್ವಿಚಾರಕರಾದ ಗುಣಕರ್ ಸ್ವಾಗತಿಸಿದರು ತೆಕ್ಕಾರು ಸೇವಾ ಪ್ರತಿನಿಧಿ ಶಿವರಾಮ್ ನಿರೂಪಿಸಿದರು