ಸ್ವಿಗ್ಗಿ ಮತ್ತು ಜೊಮ್ಯಾಟೋ ತಮ್ಮ ಪ್ಲಾಟ್ಫಾರ್ಮ್ ಶುಲ್ಕವನ್ನು ಹೆಚ್ಚಿಸಿದ್ದು, ಗ್ರಾಹಕರ ಮೇಲೆ ಹೆಚ್ಚುವರಿ ಭಾರ ಉಂಟುಮಾಡಿದೆ. ಸ್ವಿಗ್ಗಿ ಹೆಚ್ಚುವರಿ ಶುಲ್ಕ ಬಿಸಿ ಮಾಜಿ ಸಂಸದೆ ಸುಮಲತಾ ಅಂಬರೀಶ್ಗೂ ತಟ್ಟಿದೆ.

ಅವರು ರಾಮೇಶ್ವರಂ ಕೆಫೆಯಿಂದ ಪೊಂಗಲ್ ಆರ್ಡರ್ ಮಾಡಿದ್ದರು. ಆಹಾರದ ಮೂಲ ಬೆಲೆ ₹115 ಇದೆ. ಆದರೆ ಸ್ವಿಗ್ಗಿ, ಐಟಂ & ಇತರೆ ಶುಲ್ಕ ಸೇರಿಸಿ ₹273 ವಸೂಲಿ ಮಾಡಿದೆ. ಅಂದರೆ, ಮೂಲ ₹115 ನ ಪೊಂಗಲ್ಗೆ ₹158 ಶುಲ್ಕ ವಿಧಿಸಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.




