ಉಪ್ಪಳ: ಹೇರೂರು ಕೈಲ್‌ಕಾರ್ ನಿವಾಸಿ ಪದ್ಮನಾಭ ರೈ [45] ಶನಿವಾರ ರಾತ್ರಿ ದೇರಳಕಟ್ಟೆ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ 10 ದಿನಗಳ ಹಿಂದೆ ಅಸೌಖ್ಯ ಬಾಧಿಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನಹೊಂದಿದರು. ಅವಿವಾಹಿತರಾದ ಇವರು ಹಲವು ವರ್ಷಗಳ ಕಾಲ ಬಂದ್ಯೋಡುನಲ್ಲಿ ಟೈಲರ್ ವೃತ್ತಿಯನ್ನು ನಡೆಸುತ್ತಿದ್ದರು. ಮೃತರು [ದಿ] ಸುಬ್ಬಣ್ಣ ರೈ [ದಿ] ಸರಸ್ವತಿ ದಂಪತಿಯರ ಪುತ್ರರಾಗಿದ್ದಾರೆ. ಸಹೋದರ ಸಹೋದರಿಯರಾದ ಬಾಲಕೃಷ್ಣ ರೈ, ಜಯರಾಮ ರೈ, ರೇವತಿ, ರಮಾವತಿ, ರಾಜೀವಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.