ಮಂಜೇಶ್ವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯ ಬಿ.ಸಿ ಟ್ರಸ್ಟ್ ಮಂಜೇಶ್ವರ ತಾಲೂಕು ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕರ‍್ಯಕ್ರಮ ಕೋಳ್ಯೂರು ಆಡಿಟೋರಿಯಂನಲ್ಲಿ ಜರುಗಿತು. ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ. ಆರ್ ಶೆಟ್ಟಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಸದಸ್ಯರಾದ ಕಮಲಾಕ್ಷಿ ವಿನೋದ್ ರವರು ವಹಿಸಿಕೊಂಡಿದ್ದರು.ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಜಯಲಕ್ಷ್ಮಿ ಕಾರಂತ್ ರವರು ಮಹಿಳೆಯು ಕೌಟುಂಬಿಕ ಜೀವನದೊಂದಿಗೆ ವ್ಯತ್ತಿ ಬದುಕನ್ನು ಹೇಗೆ ನಿಭಾಯಿಸಿಕೊಂಡು ಹೋಗಬೇಕು ಎಂಬ ವಿಷಯದ ಬಗ್ಗೆ ಉತ್ತಮ ರೀತಿಯ ಮಾಹಿತಿಯನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ರವರು ಯೋಜನೆಯು ಬೆಳೆದು ಬಂದ ರೀತಿ ಹಾಗೂ ಗ್ರಾಮಾಭಿವ್ಯದ್ಧಿ ಯೋಜನೆಯಿಂದ ಜನಸಾಮಾನ್ಯರ ಬದುಕಿನಲ್ಲಾದ ಬದಲಾವಣೆಯ ಬಗ್ಗೆ ತಿಳಿಸಿಕೊಟ್ಟರು. ಮುಖ್ಯ ಅಥಿತಿಗಳಾಗಿ ಜಿಲ್ಲಾ ಜನಜಾಗ್ರತಿ ವೇದಿಕೆಯ ಅಧ್ಯಕ್ಷರಾದ ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ , ಜನಜಾಗ್ರತಿ ವೇದಿಕೆಯ ಸ್ಥಾಪಕಾಧ್ಯಕ್ಷರಾದ ಗೋಪಾಲ್ ಶೆಟ್ಟಿ ಅರಿಬೈಲ್ , ವಲಯಾಧ್ಯಕ್ಷ ಸೋಮಶೇಖರ್ ಸುವರ್ಣ, ಸಭಾಂಗಣದ ಮಾಲಕ ಉಪೇಂದ್ರ ಕುಲಾಲ್ ರವರು ಕಾರ್ಯಕ್ರಮ ಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ತಾಲ್ಲೂಕಿನ ಯೋಜನಾಧಿಕಾರಿಯವರು, ಜ್ಞಾನ ವಿಕಾಸ ಸಮನ್ವಯಾಧಿಕಾರಿಯವರು, ಮೇಲ್ವಿಚಾರಕರು,
ಸೇವಾಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು, ಶರ‍್ಯ ವಿಪತ್ತು ಘಟಕ ಹಾಗೂ ನವಜೀವನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.