
ಉಪ್ಪಳ: ತಾಸೆ ಕಲಾವಿದ ಕುಸಿದು ಬಿದ್ದು ಮೃತಪಟ್ಟರು. ಬಾಯಾರು ಕಲ್ಲಗದ್ದೆ ನಿವಾಸಿ ವರದರಾಜ್ ಜೋಗಿ ರವರ ಪುತ್ರ ಮೌನೇಶ್ ಜೋಗಿ [೨೩] ಮೃತಪಟ್ಟ ಯುವಕ. ಮಂಗಳೂರಿನ ತಂಡದಲ್ಲಿ ಇವರು ತಾಸೆ ಕಲಾವಿದರಾಗಿದ್ದು, ವಿವಿಧ ಕಡೆಗಳಿಗೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಭಾನುವಾರ ರಾತ್ರಿ ಕಾರ್ಯಕ್ರಮ ಮುಗಿಸಿ ಸೋಮವಾರ ಮುಂಜಾನೆ ದೇರಳಕಟ್ಟೆಯಲ್ಲಿರುವ ಕೊಠಡಿಗೆ ಸ್ನೇಹಿತರ ಜೊತೆ ತಲುಪಿದ್ದರು. ಸುಮಾರು ೭ಗಂಟೆಗೆ ಕುಸಿದು ಬಿದ್ದಿದ್ದು ಕೂಡಲೇ ಸಮೀಪದ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟರು. ಮೃತರು ತಂದೆ , ತಾಯಿ ವಂದಿತಾ ಸಹೋದರರಾದ ಮನೀಶ್, ಮುಖೇಶ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.





