
ಮಂಗಲ್ಪಾಡಿ: ತತ್ವಮಸಿ ಫ್ರೆಂಡ್ಸ್ ಕ್ಲಬ್ ಪ್ರತಾಪನಗರ ಇದರ ವಾರ್ಷಿಕ ಸಭೆ ಹಾಗೂ 2024-25ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ಅಧ್ಯಕ್ಷ ಅಕ್ಷಯ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ನೂತನ ಪದಾಧಿಕಾರಿಗಳಾಗಿ ಅಧ್ಯಕ್ಷರು ಕೀರ್ತನ್, ಉಪಾಧ್ಯಕ್ಷ ಹರೀಶ, ಪ್ರಧಾನ ಕಾರ್ಯದರ್ಶಿ ಜಯರಾಜ್, ಕಾರ್ಯದರ್ಶಿ ಸಚಿನ್, ಕೋಶಾಧಿಕಾರಿ ಅಕ್ಷಯ್, ಸಾಂಸ್ಕೃತಿಕ ಸಂಚಾಲಕ ಶರತ್ ಹಾಗೂ ಸದಸ್ಯರಾಗಿ ಅಜೇಶ್, ಸುಚಿನ್, ಪೃತ್ವಿಕಮಲ್, ಗಿರೀಶ್, ಮಿಥುನ್, ವಿಕ್ರಮ್, ಕಾರ್ತಿಕ್ ಇವರು ನೇಮಕಗೊಂಡರು. ಸಭೆಯಲ್ಲಿ ಕಾರ್ತಿಕ್ ಸ್ವಾಗತಿಸಿ, ಸುಚಿನ್ ದನ್ಯವಾದ ನೀಡಿದರು.





