ಇಂದಿನಿಂದ ಟ್ಯಾಕ್ಸಿ, ಲಘು ಗೂಡ್ಸ್ ವಾಹನಗಳು ಮತ್ತಷ್ಟು ದುಬಾರಿ!

Share with

ಕರ್ನಾಟಕ ಸರ್ಕಾರವು ಹಳದಿ ಬೋರ್ಡ್ ವಾಹನಗಳ ತೆರಿಗೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ಇಂದಿನಿಂದ ಜಾರಿಗೆ ಬರುವ ಈ ನೂತನ ನಿಯಮದ ಪ್ರಕಾರ, 10 ಲಕ್ಷ ರೂ.ಗಳಿಗಿಂತ ಕಡಿಮೆ ಬೆಲೆಯ ವಾಹನಗಳಿಗೆ ಲೈಫ್ ಟೈಮ್ ಟ್ಯಾಕ್ಸ್ ವಿಧಿಸಲಾಗಿದೆ. ಜೊತೆಗೆ, ಕಟ್ಟಡ ಸಾಮಾಗ್ರಿ ಸಾಗಾಟದ ವಾಹನಗಳು ಮತ್ತು ವಾಣಿಜ್ಯ ಬಳಕೆಯ ವಿದ್ಯುತ್ ವಾಹನಗಳ ಮೇಲಿನ ತೆರಿಗೆಯನ್ನೂ ಹೆಚ್ಚಿಸಲಾಗಿದೆ.

ಮೇ 1ರಿಂದ ಹೊಸ ವಾಹನ ಖರೀದಿಗೆ ಸರ್ಕಾರದ ಹೊಸ ತೆರಿಗೆ ನೀತಿ ಅನ್ವಯವಾಗಲಿದೆ. ವಾಹನ ತೆರಿಗೆ ಹೆಚ್ಚಳದ ಕರ್ನಾಟಕ ಮೋಟಾರು ವಾಹನಗಳ ತೆರಿಗೆ (ತಿದ್ದುಪಡಿ) ವಿಧೇಯಕಕ್ಕೆ ರಾಜ್ಯಪಾಲರಿಂದ ಗ್ರೀನ್ ಸಿಗ್ನಲ್​ ಸಿಕ್ಕಿದ್ದು, ನಾಳೆಯಿಂದ ಜಾರಿಗೆ ಬರಲಿದೆ. ಆ ಮೂಲಕ ಲಘು ಗೂಡ್ಸ್​ ವಾಹನಗಳು ದುಬಾರಿಯಾಗಲಿದ್ದು, ಹೊಸದಾಗಿ ಯೆಲ್ಲೋ ಬೋರ್ಡ್ ವಾಹನ ಖರೀದಿ ಮಾಡುವವರಿಗೆ ಶಾಕ್​ ಎದುರಾಗಿದೆ.

ಕರ್ನಾಟಕ ಮೋಟಾರು ವಾಹನಗಳ ತೆರಿಗೆ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಿದ ಹಿನ್ನೆಲೆ ತೆರಿಗೆ ಶಾಕ್​ ಉಂಟಾಗಿದ್ದು, ನಾಳೆಯಿಂದ ವಾಹನಗಳ ಜೀವಿತಾವಧಿ ತೆರಿಗೆ ಹೆಚ್ಚಳ ಆಗಲಿದೆ. 10 ಲಕ್ಷದೊಳಗಿನ ಟ್ಯಾಕ್ಸಿ, ಲಘು ಗೂಡ್ಸ್​ ವಾಹನಗಳ ಜೀವಿತಾವಧಿ ತೆರಿಗೆ ಶೇಕಡಾ 5ರಷ್ಟು ಏರಿಕೆ ಆಗಲಿದೆ.


Share with

Leave a Reply

Your email address will not be published. Required fields are marked *