ಬೆಳಾಲಿನಲ್ಲಿ ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ ಬರ್ಬರ ಹತ್ಯೆ..!!

Share with

ಬೆಳ್ತಂಗಡಿ ತಾಲೂಕಿನ ಬೆಳಾಲಿನಲ್ಲಿ ಹಾಡಹಗಲೇ ಶಿಕ್ಷಕರೊಬ್ಬರು ಬರ್ಬರ ಹತ್ಯೆ ನಡೆದಿರುವ ಘಟನೆ ಆ.20ರಂದು ನಡೆದಿದೆ.
ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ ಕೊಲೆಯಾದವರು.
ಬೆಳಾಲಿನಲ್ಲಿರುವ ಅವರ ಮನೆಯಂಗಳದಲ್ಲಿ ಬಾಲಕೃಷ್ಣ ಭಟ್ ಕೊಲೆಯಾಗಿದ್ದಾರೆ. ನಿಗೂಢವಾಗಿ ನಿವೃತ್ತ ಶಿಕ್ಷಕರ ಕೊಲೆ ನಡೆದಿದ್ದು, ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.

ಮನೆಯಲ್ಲಿ ಒಬ್ಬರೇ ಇದ್ದು ಇವರು ಇಬ್ಬರು ಪುತ್ರರನ್ನು ಹೊಂದಿದ್ದಾರೆ. ಓರ್ವ ಪುತ್ರ ಬೆಂಗಳೂರಿನಲ್ಲಿ ವಾಸವಿದ್ದು, ಇನ್ನೋರ್ವ ಪುತ್ತೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಇವರ ಪತ್ನಿಯು ಕೂಡಾ ಮುಖ್ಯಶಿಕ್ಷರಾಗಿದ್ದು ಕಳೆದ 5 ವರ್ಷಗಳ ಹಿಂದೆ ನಿಧನರಾಗಿದ್ದಾರೆ.


Share with