ಅಕ್ಷಯ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಅಕ್ಷಯ ಗುರು ಪುರಸ್ಕಾರ

Share with

ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಆಯೋಜನೆಯಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಅಕ್ಷಯ ಗುರು ಪುರಸ್ಕಾರ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಿ ಮಹೇಶ್ ರೈ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಯಾವಾಗ ತಾನೇ ಕಲಿಸಿದ ವಿದ್ಯಾರ್ಥಿ ಶಿಕ್ಷಕನನ್ನು ಮೀರಿ ಬೆಳೆದು ಉನ್ನತ ಸ್ಥಾನಕ್ಕೇರುತ್ತಾನೋ, ಅಂದು ಶಿಕ್ಷಕನ  ಜೀವನ ಸಾರ್ಥಕ ಎಂದರು.

ಅಕ್ಷಯ ಗುರು ಪುರಸ್ಕಾರವನ್ನು ರಾಜ್ಯ ಪ್ರಶಸ್ತಿ ವಿಜೇತರು, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಕೋಟಿಯಪ್ಪ ಪೂಜಾರಿ ಸೇರ ,ಇರ್ದೆ ಉಪ್ಪಳಿಗೆ ಸರಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ಕೆ ,ಉಜಿರೆ ಎಸ್ ಡಿ ಎಂ ಎಂಜಿನಿಯರಿಂಗ್ ಕಾಲೇಜಿನ ಸಹಪ್ರಾಧ್ಯಾಪಕ ರವೀಶ್ ಪಡುಮಲೆ ,ಹಾರಾಡಿ ಮುಖ್ಯಗುರು, ಜಿಲ್ಲಾ ಅತ್ಯುತ್ತಮ ಶಿಕ್ಷಕ  ಪ್ರಶಸ್ತಿ ವಿಜೇತರು ಶುಭಲತಾ ,ಸಂಪ್ಯ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಸಂಧ್ಯಾ ರವೀಶ್ಚಂದ್ರ,ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರು, ವಿದ್ಯಾ ಬೋಧಿನಿ ಪ್ರೌಢಶಾಲೆ ಬಾಳಿಲ ಸಹ ಶಿಕ್ಷಕರು ಉದಯಕುಮಾರ್ ರೈ ಎಸ್, ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ  ಸನ್ಮಾನ ಮಾಡಿ ಗೌರವಿಸಲಾಯಿತು.

ಶ್ರೀ ಕೋಟಿಯಪ್ಪ ಪೂಜಾರಿ ಸೇರ ಅವರು ತಮ್ಮ ಒಕ್ಕಣೆಯ ಮೂಲಕ ಕಾಲೇಜಿಗೆ ಅಭಿನಂದನೆಯನ್ನು ಸಲ್ಲಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿದ್ಯಾಮಾತಾ ಅಕಾಡೆಮಿ ನಿರ್ದೇಶಕ ಶ್ರೀ ಬಾಗೇಶ್ ರೈ ಮಾತನಾಡಿ, ನಿಮ್ಮ ಬದುಕನ್ನ ಪ್ರೀತಿಸಿ, ಇನ್ನೊಬ್ಬರ ಬದುಕನ್ನ ಗೌರವಿಸಿ ಎಂದು ವಿದ್ಯಾರ್ಥಿಗಳಿಗೆ ಜೀವನದ ಮೌಲ್ಯಗಳನ್ನು ತಿಳಿಸಿದರು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಯಂತ ನಡುಬೈಲು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರಿಗೆ ಗೌರವಿಸುವುದು ನಮ್ಮ ಭಾಗ್ಯ ಎಂದರು.

ವೇದಿಕೆಯಲ್ಲಿ ಕಾಲೇಜು ವಿದ್ಯಾರ್ಥಿ ಸಂಘದ ನಾಯಕ ವಿನೋದ್ ಕೆ ಸಿ ಹಾಗೂ ಕಾರ್ಯದರ್ಶಿ ಕುಮಾರಿ ಶೈಲಾಶ್ರೀ ಉಪಸ್ಥಿತರಿದ್ದರು. ಅಕ್ಷಯ  ಗುರು ಪುರಸ್ಕಾರದ ಸನ್ಮಾನ ಪತ್ರವನ್ನು ಕುಮಾರಿ ಭವ್ಯಶ್ರೀ ಬಿ, ರಶ್ಮಿ ಕೆ,ಮತ್ತು ಕಿಶನ್ ರಾವ್ ಪ್ರಾರ್ಥನೆ ಪ್ರಕೃತಿ ಮತ್ತು ಬಳಗದಿಂದ ನಡೆಯಿತು.  ಕಾಲೇಜಿನ ಆಡಳಿತ ನಿರ್ದೇಶಕಿ ಕಲಾವತಿ ಜಯಂತ್ ಸ್ವಾಗತಿಸಿ, ಆಡಳಿತಾಧಿಕಾರಿ ಅರ್ಪಿತ್ ಟಿಎ ವಂದಿಸಿದರು. ಪ್ರಾಂಶುಪಾಲ ಸಂಪತ್ ಪಕ್ಕಳ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕಿ‌ ಆಶಿಕಾ ಫರ್ಝಾನ ಕಾರ್ಯಕ್ರಮ ನಿರೂಪಿಸಿದರು.


Share with

Leave a Reply

Your email address will not be published. Required fields are marked *