ಹುಡುಗಿಯಾಗಿ ಬದಲಾದ ಟೀಮ್ ಇಂಡಿಯಾ ಕ್ರಿಕೆಟಿಗನ ಪುತ್ರ

Share with

ಟೀಮ್ ಇಂಡಿಯಾದ ಮಾಜಿ ಆಟಗಾರ ಸಂಜಯ್ ಬಂಗಾರ್ ಅವರ ಪುತ್ರ/ಪುತ್ರಿ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಅದು ಸಹ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಬಹಿರಂಗಪಡಿಸುವಿಕೆಯೊಂದಿಗೆ ಎಂಬುದೇ ವಿಶೇಷ.

ಸಂಜಯ್ ಬಂಗಾರ್ ಅವರ ಹಿರಿಯ ಮಗ ಆರ್ಯನ್ ತಾನು ಹಾರ್ಮೋನ್ ಪರಿವರ್ತಿಸಿಕೊಂಡಿದ್ದು, ಇದೀಗ ಹುಡುಗನಿಂದ ಹುಡುಗಿಯಾಗಿ ರೂಪಾಂತರಗೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಅಲ್ಲದೆ ಇನ್ಮುಂದೆ ನನ್ನ ಹೆಸರು ಆರ್ಯನ್ ಅಲ್ಲ, ಬದಲಾಗಿ ಅನಯಾ ಎಂದಿದ್ದಾರೆ

ಅಂದಹಾಗೆಯೇ ಅನಯಾ ಕಳೆದ 10 ತಿಂಗಳಿಂದ ಹಾರ್ಮೋನ್ ಬದಲಾವಣೆಗಾಗಿ ಚಿಕಿತ್ಸೆ ಪಡೆದಿದ್ದಾರೆ. ಇದೀಗ 10 ತಿಂಗಳ ಶಸ್ತ್ರಚಿಕಿತ್ಸೆಯ ನಂತರ ಹುಡುಗಿಯಾಗಿ ರೂಪಾಂತರಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಅಲ್ಲದೆ ಇದಕ್ಕಾಗಿ ನನ್ನ ಕ್ರಿಕೆಟ್ ಕೆರಿಯರ್ ಅನ್ನು ತ್ಯಾಗ ಮಾಡಿರುವುದಾಗಿ ಅನಯಾ ಹೇಳಿದ್ದಾರೆ.


Share with

Leave a Reply

Your email address will not be published. Required fields are marked *