ರಣ್ಬೀರ್ ಕಪೂರ್, ಯಶ್ ನಟನೆಯ ‘ರಾಮಾಯಣ’ ಚಿತ್ರದ ಹೊಸ ಅಪ್ಡೇಟ್’ವೊಂದು ಹೊರಬಿದ್ದಿದೆ.

ಸಿನಿಮಾದ ಟೀಸರ್ ಇದೇ ಏ.2ರಂದು ಹನುಮ ಜಯಂತಿ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ‘ರಾಮ’ನ ಪಾತ್ರದ ವಿಶೇಷ ತುಣುಕು ಬಿಡುಗಡೆ ಮಾಡುವುದಾಗಿ ನಿರ್ಮಾಪಕ ನಮಿತ್ ಮಲ್ಲೋತ್ರಾ ಘೋಷಿಸಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು, ಯಶ್ ಒಡೆತನದ ಮಾನ್ಸ್ಟರ್ಮೈಂಡ್ ಕ್ರಿಯೇಷನ್ ಹಾಗೂ ನಮಿತ್ ಮಲ್ಲೋತ್ರಾ ಸಾರಥ್ಯದ ಪ್ರೈಮ್ ಫೋಕಸ್ ಸ್ಟುಡಿಯೊ ನಿರ್ಮಿಸುತ್ತಿದೆ.




