ಕ್ಯಾನ್ಸರ್‌ಗೆ ತುತ್ತಾಗಿ ಕೊನೆಯುಸಿರೆಳೆದ ಕಿರುತೆರೆ ನಟಿ

Share with

ಮುಂಬಯಿ: ಖ್ಯಾತ ಕಿರುತೆರೆ ನಟಿಯೊಬ್ಬರು 38ರ ವಯಸ್ಸಿನಲ್ಲೇ ಕ್ಯಾನ್ಸರ್‌ಗೆ ತುತ್ತಾಗಿ ಕೊನೆಯುಸಿರೆಳೆದಿದ್ದಾರೆ.

‘ಪವಿತ್ರ ರಿಸ್ತಾ’ ಧಾರಾವಾಹಿ ಖ್ಯಾತಿಯ ನಟಿ ಪ್ರಿಯಾ ಮರಾಠ ನಿಧನ ಹೊಂದಿದ್ದಾರೆ. (8.31)

ಪ್ರಿಯಾ ಮರಾಠ ಕಳೆದ ಒಂದು ವರ್ಷದಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎಂದು ವರದಿ ತಿಳಿಸಿದೆ.

ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮತ್ತು ಕಿರುತೆರೆ ನಟಿಯಾಗಿದ್ದ ಅವರು ಏಪ್ರಿಲ್ 23, 1987 ರಂದು ಮುಂಬೈನಲ್ಲಿ ಜನಿಸಿದರು. ಅಲ್ಲೇ ಶಾಲಾ ಮತ್ತು ಕಾಲೇಜು ಶಿಕ್ಷಣವನ್ನು ಪಡೆದು, ನಟನಾ ರಂಗಕ್ಕೆ ಎಂಟ್ರಿ ಕೊಟ್ಟರು.

ಮರಾಠಿ ಧಾರಾವಾಹಿ ‘ಯಾ ಸುಖನೋಯ’ ಮತ್ತು ನಂತರ ‘ಚಾರ್ ದಿವಾಸ್‌ ಸಸುಚೆ’ ಮೂಲಕ ಟಿವಿಗೆ ಪಾದಾರ್ಪಣೆ ಮಾಡಿದ್ದರು.

ಇದಾದ ಬಳಿಕ ಸಾಲು ಸಾಲು ಧಾರಾವಾಹಿಗಳಲ್ಲಿ ಅವರು ನಟಿಸಿದ್ದರು. ಮರಾಠ ಬಾಲಾಜಿ ಟೆಲಿಫಿಲ್ಸ್‌ನ ‘ಕಸಂಹ್ ಸೆ’ ಧಾರಾವಾಹಿಯಲ್ಲಿ ವಿದ್ಯಾ ಬಾಲಿ ಪಾತ್ರವನ್ನು ನಿರ್ವಹಿಸಿದ್ದರು. ಆ ಬಳಿಕ ‘ಕಾಮಿಡಿ ಸರ್ಕಸ್’ ನ ಮೊದಲ ಸೀಸನ್‌ನಲ್ಲಿ ಕಾಣಿಸಿಕೊಂಡರು. ಸೋನಿ ಟಿವಿಯಲ್ಲಿ ಪ್ರಸಾರವಾದ ಜನಪ್ರಿಯ ಧಾರಾವಾಹಿ ‘ಬಡೆ ಅಚ್ಚೆ ಲಗೇ ಹೈ’ ನಲ್ಲಿ ಜ್ಯೋತಿ ಮಲ್ಲೋತ್ರಾ ಎನ್ನುವ ಪಾತ್ರವನ್ನು ಅವರು ಮಾಡಿದ್ದರು.

‘ತು ತಿಥೆ ಮಿ’, ‘ಭಾಗೇ ರೇ ಮನ್’, ‘ಜಯಸ್ತುತೆ’ ಮತ್ತು ‘ಭಾರತ್‌ ಕಾ ವೀರ್ ಪುತ್ರ – ಮಹಾರಾಣಾ ಪ್ರತಾಪ್’. ಜೀ ಟಿವಿಯಲ್ಲಿ ಪ್ರಸಾರವಾದ ‘ಪವಿತ್ರ ರಿಸ್ತಾ’ದಲ್ಲಿ ವರ್ಷಾ ಸತೀಶ್ ಎನ್ನುವ ಪಾತ್ರ ಅವರಿಗೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿತ್ತು.

ಕಿರುತೆರೆ ಮಾತ್ರವಲ್ಲದೆ, ಮರಾಠ 2008ರ ಹಿಂದಿ ಚಲನಚಿತ್ರ ‘ಹಮ್ಮೆ ಜೀನಾ ಸೀಖ್ ಲಿಯಾ’ದಲ್ಲಿ ನಟಿಸಿದ್ದರು. ಗೋವಿಂದ್ ನಿಹಲಾನಿ ನಿರ್ದೇಶನದ ಮರಾಠಿ ಚಲನಚಿತ್ರ ‘ತಿ ಅನಿ ಇಟಾ‌ರ್’ ಅವರು ನಟಿಸಿದ್ದರು.

ಮರಾಠ 2012 ರಲ್ಲಿ ಶಾಂತನು ಮೋಘ ಅವರನ್ನು ವಿವಾಹವಾವಾಗಿದ್ದರು.


Share with

Leave a Reply

Your email address will not be published. Required fields are marked *