ಉಳ್ಳಾಲ: ಹಣ್ಣುಹಂಪಲು ಹೊತ್ತ ಟೆಂಪೋ ಬ್ರೇಕ್ ವೈಫಲ್ಯದಿಂದಾಗಿ ಮುಡಿಪು ಮಿತ್ತಕೋಡಿಯಲ್ಲಿ ಪಲ್ಟಿಯಾದ ಘಟನೆ ನಡೆದಿದೆ.
ಟೆಂಪೋದಲ್ಲಿ ಕಲ್ಲಾಪು ಗ್ಲೋಬಲ್ ಮಾರುಕಟ್ಟೆಯಿಂದ ಮೆಲ್ಕಾರ್ ಕಡೆಗೆ ಹಣ್ಣುಹಂಪಲು ಸಾಗಿಸಲಾಗುತ್ತಿತ್ತು. ಬ್ರೇಕ್ ವೈಫಲ್ಯದಿಂದಾಗಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಐದು ಅಡಿ ಆಳದ ಕಂದಕಕ್ಕೆ ಉರುಳಿಬಿದ್ದಿದ್ದು ಟೆಂಪೊ ಚಾಲಕನಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.