ಶಿಕ್ಷಕರು ಸೇವೆಯಲ್ಲಿ ಉಳಿಯಲು ಅಥವಾ ಬಡ್ತಿಗೆ ಅರ್ಹರಾಗಲು ಶಿಕ್ಷಕರ ಅರ್ಹತಾ ಪರೀಕ್ಷೆ (TET)ಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

TET ಕಡ್ಡಾಯಗೊಳಿಸುವ ಕಾನೂನು ಜಾರಿಗೆ ಬರುವ ಮೊದಲು ನೇಮಕಗೊಂಡವರಿಗೂ ಈ ತೀರ್ಪು ಅನ್ವಯಿಸುತ್ತದೆ. ನ್ಯಾ. ದೀಪಂಕರ್ ದತ್ತ & ನ್ಯಾ. ಮನಮೋಹನ್ ಅವರ ಪೀಠವು, ಶಿಕ್ಷಕರ ಅರ್ಹತೆಗೆ ಸಂಬಂಧಿಸಿದಂತೆ ಅಂಜುಮನ್ ಇಶಾತ್-ಇ-ತಾಲಿಮ್ ಟ್ರಸ್ಟ್ vs ಮಹಾರಾಷ್ಟ್ರದ ಹಲವಾರು ಸಿವಿಲ್ ಮೇಲ್ಮನವಿಗಳನ್ನ ಆಲಿಸುವಾಗ ಈ ತೀರ್ಪು ನೀಡಿತು.




