ಇನ್ಮುಂದೆ ದೇವಸ್ಥಾನಗಳಲ್ಲಿ ಈ ಹೂ ಬ್ಯಾನ್..! ಯಾವುದು ಗೊತ್ತಾ?

Share with

ತಿರುವನಂತಪುರ : ಇತ್ತೀಚೆಗೆ ಕಣಗಿಲೆ ಹೂವನ್ನು ತಿಂದು ಯುವತಿಯೊಬ್ಬಳು ಸಾವನಪ್ಪಿದ ಬೆನ್ನಲ್ಲೇ ಕೇರಳದ ದೇವಸ್ಥಾನಗಳಲ್ಲಿ ಈ ಹೂವನ್ನು ಬ್ಯಾನ್ ಮಾಡಲಾಗಿದೆ. ತಿರುವಾಂಕೂರು ದೇವಸ್ವಂ ಮಂಡಳಿಯ ತನ್ನ ಅಧೀನದಲ್ಲಿರುವ ಎಲ್ಲಾ ದೇವಸ್ಥಾನಗಳಲ್ಲಿ ನೈವೇದ್ಯ ಮತ್ತು ಪ್ರಸಾದದಲ್ಲಿ ಕಣಗಿಲೆ ಹೂವು ಬಳಕೆ ಮಾಡಬಾರದು ಎಂದು ಆದೇಶ ನೀಡಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಟಿಡಿಬಿ ಅಧ್ಯಕ್ಷ ಪ್ರಶಾಂತ್‌, ‘ಅಲಪ್ಪುಳ ದೇಗುಲದಲ್ಲಿ ಪ್ರಸಾದ ರೂಪದಲ್ಲಿ ನೀಡಿದ ಕಣಗಿಲೆ ಹೂ ಸೇವಿಸಿ ಮಹಿಳೆಯೊಬ್ಬರು ಮೃತ ಪಟ್ಟ ಘಟನೆ ಬೆಳಕಿಗೆ ಬಂದಿದೆ. ಅದೇ ರೀತಿ ಪಟ್ಟಣಂತಿಟ್ಟದಲ್ಲೂ ಇದೇ ರೀತಿಯ ಘಟನೆಗಳು ನಡೆದಿವೆ. ಆದ್ದರಿಂದ ಕಣಗಿಲೆ ಹೂವನ್ನು ದೇಗುಲಗಳಲ್ಲಿ ಬಳಸಬಾರದು ಎಂದು ಟಿಡಿಬಿ ತೀರ್ಮಾನಿಸಿದೆ. ಇದರ ಬದಲಾಗಿ ಗುಲಾಬಿ, ತುಳಸಿ, ತೇಚಿ, ದಾಸವಾಳ, ಮಲ್ಲಿಗೆ ಹೂಗಳನ್ನು ಬಳಸಬಹುದು ಎಂದು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *