
ಉಪ್ಪಳ: ಬೇಕೂರು ಸೇವಾಭಾರತಿ ಕಲಾವೃಂದ ಭಜನಾ ಮಂದಿರ ಇದರ 26ನೇ ವಾರ್ಷಿಕೋತ್ಸವ ಹಾಗೂ ದ್ವಿತೀಯ ವರ್ಷದ ಭಜನೋತ್ಸವ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಜ.19ರಂದು ನಡೇಯಲಿದೆ. ಬೆಳಿಗ್ಗೆ 5ಕ್ಕೆ ಗಣಹೋಮ, 6.30ಕ್ಕೆ ನಟೇಶ ಬಳ್ಳಕ್ಕುರಾಯ ಇವರಿಂದ ದೀಪ ಪ್ರಜ್ವಲನೆ, 6.35ಕ್ಕೆ ವಿವಿಧ ತಂಡಗಳಿAದ ಭಜನಾ ಸಂಕೀರ್ತನೆ ಪ್ರಾರಂಭ, ಸಂಜೆ 6.30ಕ್ಕೆ ಭಜನಾ ಮಂಗಳೋತ್ಸವ, ಸಂಜೆ 7ಕ್ಕೆ ಶ್ರೀ ಸತ್ಯನಾರಾಯಣ ಪೂಜೆ ಪ್ರಾರಂಭ, ರಾತ್ರಿ 8.30ಕ್ಕೆ ಮಹಾ ಮಂಗಳಾರತಿ, ಪ್ರಸಾದ ವಿತರಣೆ, ರಾತ್ರಿ 8.45ಕ್ಕೆ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರಿಂದ ಆಶೀರ್ವಚನ, ಈ ಸಂದರ್ಭದಲ್ಲಿ ಅಡ್ವಕೇಟ್ ದೀಪಾಶ್ರೀ ಬಿ. ಬೇಕೂರು ಇವರನ್ನು ಸನ್ಮಾನಿಸಲಾಗುವುದು, ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.