ಮಂಜೇಶ್ವರ: ಕುಂಜತ್ತೂರು ಪ್ರೌಢ ಶಾಲೆಯ 1992-93 ನೇ ಶೈಕ್ಷಣಿಕ ವರ್ಷದ ಹಳೆ ವಿದ್ಯಾರ್ಥಿಗಳ ಗುರು ವಂದನಾ ಹಾಗೂ ಸ್ನೇಹ ಸಂಗಮ ಸಮಾರಂಭ ಬಾನುವಾರದಂದು ಭಾರೀ ವಿಜ್ರಂಭಣೆಯಿಂದ ಯಶಸ್ವಿಯಾಗಿ ನಡೆಸಲಾಯಿತು.
ಶಾಲಾ ಹಳೆ ವಿದ್ಯಾರ್ಥಿ ಹಾಗೂ ಕಾಸರಗೋಡು ಸರಕಾರಿ ಕಾಲೇಜಿನ ಅಸಿಸ್ಟಂಟ್ ಪ್ರೊ. ಸುಜಾತ ಎಸ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ ಜಿ. ದೀಪ ಬೆಳಗಿಸಿ ಉದ್ಘಾಟಿಸಿದರು.
ಶಾಲಾ ಹಳೆ ವಿದ್ಯಾರ್ಥಿ ಹಾಗೂ ಉದ್ಯಮಿ ಎಂ ಪಿ ಇಸ್ಮಾಯಿಲ್ ಪ್ರಾಸ್ತಾವಿಕ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಡಾ. ಮನ್ಸೂರ್ ಹಾಗೂ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಪತ್ರಕರ್ತ ರಹ್ಮಾನ್ ಉದ್ಯಾವರ ರವರು ಉಪಸ್ಥರಿದ್ದರು.
ಈ ಸಂದರ್ಭ ವೇದಿಕೆಯಲ್ಲಿ ಈಶ್ವರ ಮಾಸ್ಟರ್, ಸರಸ್ವತಿ ಟೀಚರ್, ಆನಂದ ಮಾಸ್ಟರ್, ಪ್ರಸನ್ನ ಟೀಚರ್, ಅನಿತಾ ಟೀಚರ್, ಶಿಶುಪಾಲನ್, ವಾರ್ಡ್ ಸದಸ್ಯ ರಾಜೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಹಳೆಯ ವಿದ್ಯಾರ್ಥಿಗಳು ಮತ್ತೆ ಒಂದೇ ವೇದಿಕೆಯಲ್ಲಿ ಸೇರಿದ ಈ ಅಪರೂಪದ ಕಾಯಕ್ರಮದ ಜೊತೆಯಾಗಿ ನೆನಪುಗಳ ಜಾತ್ರೆಗೆ ಸ್ನೇಹ ಸಂಗಮ ಸಮಾರಂಭ ಸಾಕ್ಷಿಯಾಯಿತು. ವಿದ್ಯಾರ್ಥಿಗಳು ಜೀವನದ ಎಲ್ಲಾ ಅಮೂಲ್ಯ ಕ್ಷಣಗಳನ್ನು ಹಂಚಿಕೊಂಡು ಕಳೆದು ಹೋದ ಜೀವನವನ್ನು ಮೆಲುಕಾಡಿದರು.
ಬಳಿಕ ನಿವೃತ ಅಧ್ಯಾಪಕರಾದ ಈಶ್ವರ ಮಾಸ್ಟರ್ ಯೋಗದಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವ ಹಾಗೂ ವೈದ್ಯರಿಂದ ದೂರವಿರುವ ಕೆಲವೊಂದು ಸೂತ್ರಗಳನ್ನು ವಿವರಿಸಿ ಕೊಟ್ಟರು.
ವೇದಿಕೆಯಲ್ಲಿ ಅಧ್ಯಾಪಕರುಗಳನ್ನು ಹಾಗೂ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿ ಕೊಂಡವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಖಲೀಲ್ ಬಜಾಲ್ ಸ್ವಾಗತಿಸಿ ಹರಿಣಾಕ್ಷಿ ವಂದಿಸಿದರು