ರೌಡಿಸಂ ಲೋಕವನ್ನು ನಿಯಂತ್ರಿಸುತ್ತಿದ್ದ ಕುಖ್ಯಾತ ರೌಡಿ ಬಂಧನ

Share with

ಮಂಗಳೂರು: ಮಂಗಳೂರು ನಗರದಲ್ಲಿ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ರೌಡಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳೂರಿನ ಪಡೀಲ್ ಫೈಸಲ್ ನಗರದ ನಿವಾಸಿಯಾದ ಆರೋಪಿಯು ಗೋವಾ ಹಾಗೂ ಮುಂಬೈನಿಂದ ರೌಡಿಸಂ ಲೋಕವನ್ನು ನಿಯಂತ್ರಿಸುತ್ತಿದ್ದ ತಲ್ಲತ್ ಗ್ಯಾಂಗ್ ಲೀಡರ್‌‌ ತಲ್ಲತ್‌ನನ್ನು (೩೯) ಪೊಲೀಸರು ಬಂಧಿಸಿದ್ದು, ಕಳೆದ 20 ವರ್ಷಗಳಿಂದ ತಲ್ಲತ್‌ ಮಂಗಳೂರಿನಲ್ಲಿ ನಡೆದ ಹಲವು ಅಪರಾಧ ಪ್ರಕರಣದ ಆರೋಪಿಯಾಗಿದ್ದನು.

ಇತ್ತೀಚೆಗೆ ತಲ್ಲನ್ ಮುಂಬೈನಿಂದ ಊರಿಗೆ ಬಂದಿದ್ದು, ಇದರ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಆರೋಪಿಯನ್ನು ಕೊಟ್ಟಾರದಲ್ಲಿ ಬಂಧಿಸಿದ್ದು ನಂತರ ಗ್ರಾಮಾಂತರ ಠಾಣೆ ಪೊಲೀಸರ ವಶಕ್ಕೆ ನೀಡಿದ್ದಾರೆ, ತಲ್ಲತ್ ವಿರುದ್ಧ ಮಂಗಳೂರು ಗ್ರಾಮಾಂತರ, ಕಂಕನಾಡಿ ನಗರ, ಹರಾಜ, ಬರ್ಚಿ, ಮುಂಬೈ ಮುಂತಾದ ಕಡೆಗಳಲ್ಲಿ ಹಲವು ಪ್ರಕರಣಗಳು ದಾಖಾಲಾಗಿದ್ದು ಒಟ್ಟು 28 ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ ಎಂದು ತಿಳಿದು ಬಂದಿದೆ.


Share with

Leave a Reply

Your email address will not be published. Required fields are marked *