ಯಕ್ಷಗಾನದ ವೇಳೆ ದೇವಿಯ ಶಿರದಲ್ಲಿ ಕುಳಿತ ಹಕ್ಕಿ

Share with

ಬಂಟ್ವಾಳ: ಬಿ.ಸಿ.ರೋಡಿನ ಮೊಡಂಕಾಪು ಬಳಿ ಚೆನ್ನರಪಾಲುನಲ್ಲಿ ನ. 24ರ ರಾತ್ರಿ ನಡೆದ ಯಕ್ಷಗಾನದ ಸಂದರ್ಭ ಪಕ್ಷಿಯೊಂದು ಶ್ರೀದೇವಿಯ ಶಿರದಲ್ಲಿ ಕುಳಿತು ಗಮನ ಸೆಳೆದಿದ್ದು, ಅದರ ವೀಡಿಯೋ ಈಗ ಎಲ್ಲೆಡೆ ಹರಡಿದೆ.

ಚೆನ್ನರಪಾಲುನಲ್ಲಿ ಡೊಂಬಯ್ಯ ಕುಲಾಲ್ ಅವರ ಮನೆಯವರು ಕಟೀಲು ಮೇಳದ ಯಕ್ಷಗಾನ ಆಡಿಸಿದ್ದು, ರಾತ್ರಿ 11ರ ಸುಮಾರಿಗೆ ದೇವಿ ವೇಷಧಾರಿಯು ಕದಂಬ ವನದಲ್ಲಿ ಉಯ್ಯಾಲೆಯಲ್ಲಿ ಕುಳಿತಿರುವ ದೃಶ್ಯದ ವೇಳೆ ಎಲ್ಲಿಂದಲೋ ಹಕ್ಕಿಯೊಂದು ಹಾರಿ ಬಂದು ವೇಷಧಾರಿಯ ಎಡ ಕಿವಿಯ ಹತ್ತಿರ ಕುಳಿತಿದೆ.

ಈ ವೇಳೆ ವೇಷಧಾರಿಯೂ ಹಕ್ಕಿಯನ್ನು ಓಡಿಸದೆ ಸುಮ್ಮನಿದ್ದು, ಬಳಿಕ ಅದು ನೇರವಾಗಿ ಶಿರದಲ್ಲಿ ಹೋಗಿ ಕುಳಿತಿದೆ. ಅದರ ವೀಡಿಯೋವನ್ನು ಯಕ್ಷಗಾನ ಪ್ರೇಕ್ಷಕರೊಬ್ಬರು ಸೆರೆ ಹಿಡಿದಿದ್ದು, ಇದೀಗ ಅದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


Share with

Leave a Reply

Your email address will not be published. Required fields are marked *