ಬಂಟ್ವಾಳ : ವಿಧಾನ ಪರಿಷತ್ತಿನ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದ ಎನ್.ಡಿ. ಎ ಅಭ್ಯರ್ಥಿ ಶ್ರೀ ಎಸ್. ಎಲ್ ಬೋಜೇಗೌಡ ಅವರ ಪರವಾಗಿ ಸಿದ್ದಕಟ್ಟೆ ಸರಕಾರಿ ಪ್ರೌಢ ಶಾಲೆಯಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಮತಯಾಚಿಸಿದರು.ಈ ಸಂದರ್ಭದಲ್ಲಿ ಪ್ರಮುಖರಾದ ತುಂಗಪ್ಪ ಬಂಗೇರಾ,ಸುಲೋಚನ ಜಿ.ಕೆ ಭಟ್,ದೇವದಾಸ್ ಶೆಟ್ಟಿ,ರತ್ನಕುಮಾರ್ ಚೌಟ,ಸತೀಶ್ ಪೂಜಾರಿ,ಪ್ರಭಾಕರ್ ಪ್ರಭು, ಮಂದಾರತಿ ಶೆಟ್ಟಿ,ಸುರೇಶ್ ಕುಲಾಲ್,ದೀಪಕ್ ಶೆಟ್ಟಿಗಾರ್,ತಾರನಾಥ ಕಜೇಕಾರ್,ಉಮೇಶ್ ಗೌಡ,ಪುರುಷೋತ್ತಮ ಶೆಟ್ಟಿ ವಾಮದಪದವು ಉಪಸ್ಥಿತರಿದ್ದರು.