ಮಂಜೇಶ್ವರ: ಕೂಲಿ ಕಾರ್ಮಿಕನ ಶವ ಹೊಳೆಯಲ್ಲಿ ಪತ್ತೆ

Share with

ಮಂಜೇಶ್ವರ: ಮನೆಯಿಂದ ಹೊರಗೆ ತೆರಳಿದ ಕೂಲಿ ಕಾರ್ಮಿಕನ ಶವ ಹೊಳೆಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಆನೆಕಲ್ಲು ಬಾಡಿಗೆ ಕ್ವಾಟ್ರರ್ಸ್ನಲ್ಲಿ ವಾಸಿಸುತ್ತಿರುವ ಬಾಲಕೃಷ್ಣ ನಾಯ್ಕ [39] ಮೃತಪಟ್ಟಿದ್ದಾರೆ.

ಆನೆಕಲ್ಲು ಬಾಡಿಗೆ ಕ್ವಾಟ್ರರ್ಸ್ನಲ್ಲಿ ವಾಸಿಸುತ್ತಿದ್ದ ಬಾಲಕೃಷ್ಣ ನಾಯ್ಕ

ಡಿ.29ರಂದು ಕೆಲಸ ಮುಗಿಸಿ ಸಂಜೆ ಮನೆಗೆ ಮರಳಿದ್ದರು. ಬಳಿಕ ಹೊರಗಡೆ ತೆರಳಿದ ಇವರು ರಾತ್ರಿಯಾದರೂ ಮನೆಗೆ ತಲುಪದಿದ್ದಾಗ ಊರವರು ಹುಡುಕಾಡುತ್ತಿದ್ದಂತೆ ರಾತ್ರಿ 9ಗಂಟೆಯ ವೇಳೆ ಮನೆಯ ಬಳಿರುವ ಆನೆಕಲ್ಲು ಹೊಳೆಯಲ್ಲಿ ಮೃತದೇಹ ಪತ್ತೆಯಾಗಿದೆ.

ಹೊಳೆಯ ಬದಿಯಲ್ಲಿರುವ ಕಾಲು ದಾರಿಯಿಂದ ನಡೆದು ಮನೆಗೆ ಹೋಗುತ್ತಿರು ವಾಗ ಆಯತಪ್ಪಿ ಹೊಳೆಗೆ ಬಿದ್ದಿರಬಹುದೆಂದು ಅಂದಾಜಿಸಲಾಗಿದೆ. ಮಂಜೇಶ್ವರ ಪೋಲೀಸರು ಸ್ಥಳಕ್ಕೆ ತಲುಪಿ ಊರವರ ಸಹಾಯದಿಂದ ಮೃತದೇಹವನ್ನು ಮೇಲಕೆತ್ತಿದ್ದಾರೆ. ಬಳಿಕ ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿ ಮೃತದೇಹವನ್ನು ಇರಿಸಲಾಗಿದೆ. ಮೃತರು ತಾಯಿ ದೇವಕಿ, ಪತ್ನಿ ಶಾಂಭವಿ, ಸಹೋದರ ಈಶ್ವರ ನಾಯ್ಕ, ಸಹೋದರಿ ಸುಮತಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.


Share with

Leave a Reply

Your email address will not be published. Required fields are marked *