ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಸೇರಿಸಲು ಉಕ್ಕಿ ಹರಿವ ನದಿಯಲ್ಲೇ ಕಾರು ಚಲಾಯಿಸಿದ ಗಂಡ

Share with

ಇಡುಕ್ಕಿ : ಕೇರಳದ ವಯನಾಡು ಜಿಲ್ಲೆಯಲ್ಲಿ ಈಗಾಗಲೇ ಭಾರೀ ಭೂಕುಸಿತವಾಗಿ 150ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ವಯನಾಡು ಮಾತ್ರವಲ್ಲದೆ ರಾಜ್ಯದ ಇತರೆ ಭಾಗಗಳಲ್ಲೂ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಇಡುಕ್ಕಿಯಲ್ಲಿಯೂ ನದಿಗಳು ಉಕ್ಕಿ ಹರಿಯುತ್ತಿವೆ. ಯಾವ ಕ್ಷಣದಲ್ಲಿ ಬೇಕಾದರೂ ನದಿಯ ನೀರು ಊರುಗಳಿಗೆ ನುಗ್ಗಿ ಅವಾಂತರ ಸೃಷ್ಟಿಸುವ ಅಪಾಯ ಉಂಟಾಗಿದೆ. ಇಂತಹ ಪರಿಸ್ಥಿತಿಯಲ್ಲೂ ಗಂಡನೊಬ್ಬ ಧೈರ್ಯ ಮಾಡಿ ತನ್ನ ಆಲ್ಟೋ ಕಾರಿನಲ್ಲಿ ಗರ್ಭಿಣಿ ಪತ್ನಿಯನ್ನು ಕೂರಿಸಿಕೊಂಡು ಉಕ್ಕಿ ಹರಿಯುವ ನದಿಯನ್ನು ದಾಟಿದ್ದಾನೆ.

ಸಮುದ್ರದಂತೆ ನದಿಯ ಸುತ್ತಮುತ್ತಲಿನ ಪ್ರದೇಶಕ್ಕೂ ಆವರಿಸಿಕೊಂಡ ಕೆಂಪು ಬಣ್ಣದ ನೀರು ಸೇತುವೆಯನ್ನು ಮುಳುಗಿಸಿ ಹರಿಯುತ್ತಿತ್ತು. ಆ ಉಕ್ಕಿ ಹರಿಯುವ ನದಿಯಲ್ಲೇ ನೀರು ನಿಂತ ಸೇತುವೆಯ ಮೇಲೆ ಕಾರು ಸಾಗುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ. ಆ ನೀರಿನ ರಭಸಕ್ಕೆ ಕಾರು ಆಚೀಚೆ ಓಲಾಡುತ್ತಾ ಸಾಗುತ್ತಿರುವ ವಿಡಿಯೋ ನೊಡಿದರೆ ಮೈ ಜುಮ್ಮೆನ್ನದೆ ಇರದು. ಆದರೆ, ಆತನ ಪತ್ನಿಗೆ ಡೆಲಿವರಿಗೆ ದಿನ ಸಮೀಪಿಸಿದ್ದರಿಂದ ಆಸ್ಪತ್ರೆಗೆ ಹೋಗಲೇಬೇಕಾದ ಅನಿವಾರ್ಯತೆಯಿತ್ತು. ಹೀಗಾಗಿ, ದೇವರ ಮೇಲೆ ಭಾರ ಹಾಕಿ ಅವರಿಬ್ಬರೂ ಕಾರಿನಲ್ಲಿ ನದಿ ದಾಟಿದ್ದಾರೆ.


Share with

Leave a Reply

Your email address will not be published. Required fields are marked *