ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ರಥೋತ್ಸವ ಮಾ. 12ರಂದು ಸಂಭ್ರಮದಿಂದ ಜರಗಿತು.

ದೇಗುಲದ ಅರ್ಚಕ ಕೆ.ಎನ್. ಗೋವಿಂದ ಅಡಿಗ ಅವರ ನೇತೃತ್ವ ದಲ್ಲಿ ಮುಹೂರ್ತ ಬಲಿ ಬಳಿಕ ಧ್ವಜಾ ರೋಹಣದ ಧಾರ್ಮಿಕ ಕಾರ್ಯಗಳು ನಡೆದವು. ಅರ್ಚಕರಾದ ಡಾ| ಕೆ.ಎನ್.ನರಸಿಂಹ ಅಡಿಗ, ಸುಬ್ರಹ್ಮಣ್ಯ ಅಡಿಗ, ಶ್ರೀಧರ ಅಡಿಗ, ರಾಮಚಂದ್ರ ಅಡಿಗ ಭಾಗವಹಿಸಿದ್ದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ ಕುಮಾರ್ ಶೆಟ್ಟಿ, ರಥೋತ್ಸವ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು.
ಸಂಜೆ ನಡೆದ ಶ್ರೀ ಮನ್ಮಹಾ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಭಾಗವಹಿಸಿದ್ದರು. ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಮಾಜಿ ಶಾಸಕ ಗೋಪಾಲ ಪೂಜಾರಿ, ಸಮಿತಿ ಸದಸ್ಯರಾದ ಮಹಾಲಿಂಗ ನಾಯ್ಕ, ರಘುರಾಮ ದೇವಾಡಿಗ ಆಲೂರು, ಸುರೇಂದ್ರ ಶೆಟ್ಟಿ ಅಂಕದಕಟ್ಟೆ, ರಾಜೇಶ ಕಾರಂತ ಉಪ್ಪಿನಕುದ್ರು, ಅಭಿಲಾಷ್ ಪಿ. ವಿ., ಧನಾಕ್ಷಿ, ಸುಧಾ, ಮಾಜಿ ಧರ್ಮದರ್ಶಿಗಳಾದ ರಮೇಶ ಗಾಣಿಗ ಕೊಲ್ಲೂರು, ವಂಡಬಳ್ಳಿ ಜಯರಾಮ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷೆ ಪ್ರಸನ್ನಾ ಶರ್ಮ ಮತ್ತಿತರರಿದ್ದರು. ಮಾ. 13ರಂದು ರಾತ್ರಿ 7ಕ್ಕೆ ಓಕುಳಿ, ಅವಕೃತ ಸ್ನಾನ ನಡೆಯಲಿದೆ.




