ಉಪ್ಪಳ: ನಿದ್ರಿಸುತ್ತಿದ ಕರ್ನಾಟಕ ಸಾರಿಗೆ ಸಂಸ್ತೆಯ ಬಸ್‌ಸಿಬ್ಬಂದಿಗಳ ಪೆಟ್ಟಿಯಿಂದ ಕಲೆಕ್ಷನ್ ಆಗಿದ್ದ 11,112 ರೂ, ಕಳವುಗೈದ ಘಟನೆ ನಡೆದಿದೆ. ಉಪ್ಪಳ-ಪುತ್ತೂರು ಮಧ್ಯೆ ಸಂಚರಿಸುವ ಬಿ.ಸಿ ರೋಡ್ ಡಿಪ್ಪೊದ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಸಿಬ್ಬಂದಿಗಳ ಹಣ ಕಳವುಗೈಯ್ಯಲಾಗಿದೆ. ಭಾನುವಾರ ರಾತ್ರಿ ೭.೪೫ಕ್ಕೆ ಟ್ರಿಪ್ ಮುಗಿಸಿ ಉಪ್ಪಳ ರೈಲ್ವೇ ನಿಲ್ದಾಣ ಬಳಿಯಿರುವ ಅಯ್ಯಪ್ಪ ಮಂದಿರ ಪರಿಸರದಲ್ಲಿ ಎಂದಿನoತೆ ಬಸ್‌ನ್ನು ನಿಲ್ಲಿಸಿ ನಿರ್ವಾಹಕ ಮಲ್ಲಿಕಾರ್ಜುನ ಹನ್ಸಾಲಿ ಹಾಗೂ ಚಾಲಕ ಪ್ರಶಾಂತ್ ಮಂದಿರದ ಹಾಲ್ ಬಳಿಯ ಶೆಡ್ಡ್ಯೊಂದರಲ್ಲಿ ನಿದ್ರಿಸುತ್ತಿದ್ದರು.
ಈ ವೇಳೆ ಕಲೆಕ್ಷನ್ ಹಣ, ಟಿಕೇಟ್, ಇತರ ದಾಖಲೆ ಪತ್ರಗಳನ್ನು ಮರದ ಪೆಟ್ಟಿಗೆಯಲ್ಲಿ ಇರಿಸಿ ಬೀಗ ಹಾಕಿ ಇವರ ಬಳಿಯಲ್ಲಿರಿಸಿದ್ದರು. ಸೋಮವಾರ ಮುಂಜಾನೆ ಎದ್ದು ನೋಡುವಾಗ ಪೆಟ್ಟಿಗೆ ಅಲ್ಪ ದೂರದಲ್ಲಿ ಬೀಗ ಮುರಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದರೆ ಇದರಲ್ಲಿರಿಸಿದ ಹಣ ಮಾತ್ರ ಕಳವು ಹೋಗಿದೆ. ಈ ಬಗ್ಗೆ ನಿರ್ವಾಹಕ ಮಲ್ಲಿಕಾರ್ಜುನ ಹನ್ಸಾಲಿ ಮಂಜೇಶ್ವರ ಪೋಲೀಸರಿಗೆ ದೂರು ನೀಡಿದ್ದಾರೆ. ನಿನ್ನೆ ಸಂಜೆ ಪೊಲೀಸರು ಮಂದಿರದ ಸಿಸಿ ಕ್ಯಾಮರವನ್ನು ತಪಾಸಣೆ ಮಾಡಿದ ವೇಳೆ ಓರ್ವ ವ್ಯಕ್ತಿ ಮುಂಜಾನೆ 4ರ ಹೊತ್ತಿಗೆ ಹಾದುಹೋಗುತ್ತಿರುವ ದೃಶ್ಯ ಕಂಡುಬoದಿದೆ. ಆದರೆ ಗುರುತು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲವೆನ್ನಲಾಗಿದೆ. ತನಿಖೆಯನ್ನು ಮುಂದುವರಿಸಿದ್ದಾರೆ.