ಚೆನ್ನೈ: ಪರಿಶಿಷ್ಟ ಜಾತಿ/ಪಂಗಡ ಕಾಯ್ದೆಯಡಿ ದಾಖಲಾಗಿರುವ ಪ್ರಕರಣವೊಂದರಲ್ಲಿ ಸರಿಯಾದ ವಿಚಾರಣೆ ನಡೆಸಲಿಲ್ಲ ಎಂಬ ಆರೋಪವನ್ನು ಎದುರಿಸುತ್ತಿರುವ ಕಾಂಚೀಪುರಮ್ ಉಪ ಪೊಲೀಸ್ ಸೂಪರಿಂಟೆಂಡೆಂಟ್ (ಡಿಎಸ್‌ಪಿ) ಎಮ್. ಶಂಕರ್ ಗಣೇಶ್ ರಿಗೆ ಸೆಷನ್ಸ್ ನ್ಯಾಯಾಲಯವೊಂದು ಸೋಮವಾರ ನ್ಯಾಯಾಂಗ ಬಂಧನ ವಿಧಿಸಿದೆ.

ನ್ಯಾಯಾಂಗ ಬಂಧನದ ಬಳಿಕ, ಅಧಿಕ ರಕ್ತದೊತ್ತಡ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಯೊಂದಕ್ಕೆ ದಾಖಲಾಗಿರುವ ಪೊಲೀಸ್ ಅಧಿಕಾರಿ ಮಂಗಳವಾರದವರೆಗೂ ಆಸ್ಪತ್ರೆಯಲ್ಲೇ ಉಳಿದಿದ್ದಾರೆ. ಈ ನಡುವೆ, ಸೆಶನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮದರಾಸು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.




