ಹುಲಿ ದಾಳಿ: ಮಾಲೀಕನನ್ನು ರಕ್ಷಿಸಿ ಪ್ರಾಣಬಿಟ್ಟ ಶ್ವಾನ

Share with

ತನ್ನ ಮಾಲೀಕನ ಮೇಲೆ ದಾಳಿ ಮಾಡಲು ಬಂದಿದ್ದ ಹುಲಿ ಜೊತೆ ಕಾದಾಡಿ ಜರ್ಮನ್ ಶೆಫರ್ಡ್ ನಾಯಿಯೊಂದು ಪ್ರಾಣಬಿಟ್ಟ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಶಿವಂ ಬಾರ್ಗಯ್ಯ ಎಂಬವರು ಎಂದಿನಂತೆ ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದರು. ಇವರ ಜೊತೆ ಜರ್ಮನ್ ಶೆಫರ್ಡ್ ನಾಯಿಯನ್ನು ಕರೆದುಕೊಂಡು ಹೋಗುತ್ತಿದ್ದರು.

ಹೀಗೆಯೇ ಮೊನ್ನೆ ವಾಕಿಂಗ್ ಹೋಗಬೇಕಾದರೆ ಇವರ ಮೇಲೆ ಹುಲಿ ದಾಳಿ ಮಾಡಲು ಮುಂದಾಗಿದೆ. ತಕ್ಷಣ ಶ್ವಾನ ಹುಲಿಯ ಮೇಲೆ ಎರಗಿದೆ. ಈ ಕಾದಾಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶ್ವಾನ ಪ್ರಾಣಬಿಟ್ಟಿದೆ.


Share with