ಯುಪಿಯ ಪಿಪ್ರೌಲಿ ಗ್ರಾಮಸ್ಥರು ರೇಬೀಸ್ ಭೀತಿಯಿಂದ ನಲುಗಿದ್ದಾರೆ. ಇತ್ತೀಚೆಗೆ ಗ್ರಾಮದಲ್ಲಿ ನಡೆದ ಔತಣಕೂಟದಲ್ಲಿ ಮೊಸರು ಬಜ್ಜಿ ಬಡಿಸಲಾಗಿತ್ತು. ಆದರೆ, ಅದನ್ನು ತಯಾರಿಸಲು ಹುಚ್ಚು ನಾಯಿ ಕಚ್ಚಿದ್ದ ಎಮ್ಮೆ ಹಾಲು ಬಳಸಲಾಗಿತ್ತು.

ಕೆಲವು ದಿನಗಳ ಬಳಿಕ ಆ ಎಮ್ಮೆ ರೇಬೀಸ್ ಲಕ್ಷಣಗಳಿಂದ ಸಾವನ್ನಪ್ಪಿತು. ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು, ಮೊಸರು ಬಜ್ಜಿ ಸೇವಿಸಿದ್ದ 200 ಜನರಿಗೆ ಆಂಟಿ-ರೇಬೀಸ್ ಲಸಿಕೆ ನೀಡಿದ್ದಾರೆ. ಸದ್ಯಕ್ಕೆ ಯಾರೂ ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.




