ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಅಭ್ಯರ್ಥಿಯನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಕೆ. ಜಯಪ್ರಕಾಶ್ ಹೆಗ್ಡೆ ಅವರು ಹಿಂದೆ ಕಾಂಗ್ರೆಸ್ ನಲ್ಲೇ ಇದ್ದರೂ ಈಗ ಮತ್ತೆ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಹೆಗ್ಡೆ ಅವರ ಸೇರ್ಪಡೆಯಿಂದ ಕಾಂಗ್ರೆಸ್ ಗೆ ಶಕ್ತಿ ಬಂದಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಉಡುಪಿಯ ಆದಿಉಡುಪಿ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕೊಪ್ಪಳ ಸಂಸದ ಕರಡಿ ಸಂಗಣ್ಣನನ್ನು ನಾನು ಭೇಟಿಯಾಗಿಲ್ಲ. ಪ್ರತಾಪ್ ಸಿಂಹ ಸೀಟು ತಪ್ಪಿಸಿದ್ದು ಯಾಕೆ ಎಂದು ಬಿಜೆಪಿ ಅವರಲ್ಲಿ ಕೇಳಬೇಕು. ಅವರಿಗೆ ಸೀಟು ತಪ್ಪಲು ಕಾರಣ ಏನು ನನಗೆ ಗೊತ್ತಿಲ್ಲ. ನೀವು ಪ್ರತಾಪ ಸಿಂಹನನ್ನೇ ಕೇಳಿ ತಿಳ್ಕೊಳ್ಳಿ. ಪಾಪ ಯಾಕೆ ತಪ್ಪಿಸಿದರೂ ಎಂದು ಪ್ರತಾಪ್ ಸಿಂಹನನ್ನು ಕೇಳಿ.. ನನಗೆ ಗೊತ್ತಿಲ್ಲ ಎಂದರು.