ಉಪ್ಪು ಜಾಸ್ತಿ ಎಂದು ಗರ್ಭಿಣಿ ಪತ್ನಿಯನ್ನೇ ಕೊಂದ ಗಂಡ!

Share with

ಊಟದಲ್ಲಿ ಉಪ್ಪು ಹೆಚ್ಚಾಗಿದೆ ಎಂದು ಗರ್ಭಿಣಿ ಪತ್ನಿಗೆ ಪತಿ ತೀವ್ರವಾಗಿ ಹಲ್ಲೆ ನಡೆಸಿದ ಘಟನೆ UPನಲ್ಲಿ ನಡೆದಿದೆ.

ಒಂದು ಹಂತದಲ್ಲಿ ಪತ್ನಿ ಮನೆಯ ಮೇಲಿನ ಮಹಡಿಯಿಂದ ಕೆಳಗೆ ಬಿದ್ದಿದ್ದು, ಸಂಬಂಧಿಕರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾಳೆ. ಆದರೆ, ಪತಿಗೆ ತನ್ನ ಅತ್ತಿಗೆಯೊಂದಿಗೆ (ಪತ್ನಿಯ ಸಹೋದರಿ) ಅಕ್ರಮ ಸಂಬಂಧವಿತ್ತು ಎಂದು ಮೃತಳ ಸಹೋದರ ಆರೋಪಿಸಿದ್ದಾನೆ. ಸದ್ಯ ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.


Share with

Leave a Reply

Your email address will not be published. Required fields are marked *