ಕಂಬಳದ ಹೀರೋ ‘ನಾಗು’ ಇನ್ನಿಲ್ಲ!

Share with

ಕರ್ನಾಟಕದ ಸಾಂಪ್ರದಾಯಿಕ ಕ್ರೀಡೆ ಕಂಬಳದಲ್ಲಿ ಹೆಸರು ಮಾಡಿದ್ದ ‘ನಾಗು’ ಎಂಬ ಕೋಣ ಅಸುನೀಗಿದೆ.

ಕಳೆದ ವಾರವಷ್ಟೇ ಕಂಬಳದ ಮತ್ತೊಬ್ಬ ಉದಯೋನ್ಮುಖ ತಾರೆಯಾಗಿದ್ದ ‘ಲಕ್ಕಿ’ಯನ್ನು ಕಳೆದುಕೊಂಡಿದ್ದು, ಇದು ಮತ್ತೊಂದು ಆಘಾತ ಎನ್ನುತ್ತಾರೆ ಕಂಬಳಾಭಿಮಾನಿಗಳು. 4 ವರ್ಷಗಳಿಂದ ಹಲಗೆ ಸೀನಿಯರ್ ವಿಭಾಗದಲ್ಲಿ ಹಲವು ಪ್ರಶಸ್ತಿಗಳನ್ನು ತಂದುಕೊಟ್ಟಿದ್ದ ನಾಗು ಹೃದಯಾಘಾತದಿಂದ ಅಸುನೀಗಿದೆ. ಜಂಪು ಮಂಕುತೋಟ ಅನಿಲ್ ಶೆಟ್ಟಿಯವರ ಯಜಮಾನಿಕೆಯಲ್ಲಿ ನಾಗು ಬೆಳೆಯುತ್ತಿದ್ದ ಎನ್ನಲಾಗಿದೆ


Share with