ಸಿನಿಮೀಯ ಸ್ಟೈಲ್ ನಲ್ಲಿ ಕಳ್ಳನ ಬೆನ್ನು ಹತ್ತಿದ ಕೇರಳ ಪೊಲೀಸ್..!

Share with

ಕಾಸರಗೋಡು:
ಕೇರಳದಲ್ಲಿ ಸಿನಿಮೀಯ ರೀತಿಯಲ್ಲಿ ಪೊಲೀಸರು ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ.
ನಡುರಸ್ತೆಯಲ್ಲೇ ಪೊಲೀಸರ ಕಾರ್ಯಾಚರಣೆ ವಿಡಿಯೋ ಇದೀಗ ವೈರಲ್ ಆಗಿದೆ.

ಕೆಲ ಸಮಯದಿಂದ ಕೇರಳದ ಕಾಸರಗೋಡು ಜಿಲ್ಲೆಯ ಪೈವಳಿಕೆ ಚೇವಾರು ಮೊದಲಾದ ಕಡೆಗಳಲ್ಲಿ ನಿರಂತರ ಕಳ್ಳತನ ನಡೆಯುತ್ತಿದ್ದು ಈ ಕುರಿತಾಗಿ ಮಂಜೇಶ್ವರ, ಉಪ್ಪಳ ಪೊಲೀಸ್ ಠಾಣೆಗಳಲ್ಲಿ ಹಲವು ದೂರುಗಳು ದಾಖಲಾಗಿತ್ತು. ಈ ಹಿಂದೆಯಷ್ಟೇ ಚೇವಾರಿನ ಗೋಪಾಲಕೃಷ್ಣ ಭಟ್ ಎಂಬವರ ಕುತ್ತಿಗೆಯಿಂದ ಚಿನ್ನದ ಚೈನ್ ಕದ್ದು ಆರೋಪಿ ಪರಾರಿಯಾಗಿದ್ದ. ಈ ಎಲ್ಲಾ ಘಟನೆಗಳ ಬಳಿಕ ಕೇರಳ ಪೊಲೀಸ್ ಹೈ ಅಲರ್ಟ್ ಆಗಿದ್ದು ಕಳ್ಳನ ಬೆನ್ನು ಬಿದ್ದಿದ್ದರು. ಇದೀಗ ಅದೇ ಕಳ್ಳನನ್ನು ಸಾಹಸಮಯ ರೀತಿಯಲ್ಲಿ ಸಿನೆಮಾ ಸ್ಟೈಲ್ನಲ್ಲಿ ನಡುರಸ್ತೆಯಲ್ಲೇ ಪೊಲೀಸರು ಬಂಧಿಸಿದ್ದಾರೆ. ಓಡಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಆರೋಪಿಯನ್ನು ಸಾರ್ವಜನಿಕರ ಸಹಕಾರದಿಂದ ಹೆಡೆಮುರಿ ಕಟ್ಟಿದ್ದಾರೆ. ಆರೋಪಿ ಮಂಗಳೂರು ರಿಜಿಸ್ಟ್ರೇಷನ್ ವಾಹನದಲ್ಲಿ ಓಡಾಡುತ್ತಿದ್ದು, ಈತ ಉಳ್ಳಾಲದ ನಿವಾಸಿ ಎಂದು ಗೊತ್ತಾಗಿದೆ. ಈ ಹಿಂದೆ ಹತ್ತಕ್ಕೂ ಹೆಚ್ಚು ಪ್ರಕರಣದಲ್ಲಿ ಈತನ ಅಪರಾಧ ಸಾಬೀತಾಗಿ ಶಿಕ್ಷೆ ಕೂಡಾ ಅನುಭವಿಸಿದ್ದ ಮಾಹಿತಿ ಇದೆ. ಈ ಎಲ್ಲಾ ಡಿಟೈಲ್ ಕಲೆ ಹಾಕಿದ್ದ ಪೊಲೀಸರು ಆರೋಪಿ ಅಡ್ಡಾಡುವ ಜಾಗದಲ್ಲಿ ಹಿಂಬಾಲಿಸಿಕೊಂಡು ಬಂದಿದ್ದರು. ಮನೆಯೊಂದರಲ್ಲಿ ಕಳ್ಳತನ ಮಾಡಲ ಯತ್ನಿಸುವ ವೇಳೆ ಪೊಲೀಸರ ಕೈನಿಂದ ಜಸ್ಟ್ ಮಿಸ್ ಆಗಿದ್ದ. ಆದ್ರೆ ಬೆನ್ನು ಬಿಡದ ಪೊಲೀಸರು ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ. ಪೊಲೀಸರ ಈ ಕಾರ್ಯಾಚರಣೆಯ ವಿಡಿಯೋ ಈಗ ವೈರಲ್ ಆಗಿದೆ.


Share with

Leave a Reply

Your email address will not be published. Required fields are marked *