ಉತ್ತರ ಪ್ರದೇಶದಲ್ಲಿ, ಪ್ರೇಯಸಿ ಕರೆದಿದ್ದರಿಂದ ವಿಕಾಶ್ ಎಂಬಾತ ಆಕೆಯ ಮನೆಗೆ ಹೋಗಿದ್ದಾನೆ. ಇಬ್ಬರೂ ರಾತ್ರಿಯಿಡೀ ಒಟ್ಟಿಗೆ ಇದ್ದರು. ಬೆಳಗ್ಗೆ ಇಬ್ಬರ ನಡುವೆ ಜಗಳವಾಗಿದ್ದು, ಕೋಪಗೊಂಡ ಆ ಮಹಿಳೆ ಬ್ಲೇಡ್ ನಿಂದ ಆತನ ಜನನಾಂಗವನ್ನು ಕತ್ತರಿಸಿದ್ದಾಳೆ.

ರಕ್ತ ಸೋರುತ್ತಿದ್ದ ಸ್ಥಿತಿಯಲ್ಲಿ ವಿಕಾಶ್ ತಮ್ಮ ಮನೆಗೆ ಹಿಂದಿರುಗಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಆದರೆ, ವಿಕಾಶ್ ಅವರ ತಾಯಿಯ ಮೂಲಕ ಈ ಮಾಹಿತಿ ಹೊರಬಿದ್ದಿದೆ.




