ಹಾಸನ ಜಿಲ್ಲೆಯಲ್ಲಿ ಅತೀ ಕಡಿಮೆ 8.1 ಡಿ.ಸೆ ಕನಿಷ್ಠ ತಾಪಮಾನ

Share with

ಬೆಂಗಳೂರು: ಹಾಸನ ಜಿಲ್ಲೆಯಲ್ಲಿ ಬುಧವಾರ 8.1 ಡಿ.ಸೆ.. ಅತೀ ಕಡಿಮೆ ತಾಪಮಾನ ದಾಖಲಾಗಿದೆ. ರಾಜ್ಯಾದ್ಯಂತ ಡಿ.31ರವರೆಗೆ ಒಣಹವೆ ಮುಂದುವರಿಯುವ ಸಾಧ್ಯತೆಗಳಿವೆ. ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ರಾತ್ರಿಯ ವೇಳೆ ಕನಿಷ್ಠ ತಾಪಮಾನವು 10 ರಿಂದ 12 ಡಿ.ಸೆ.. ದಾಖಲಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.

ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ರಾತ್ರಿ ವೇಳೆ 12 ರಿಂದ 14 ಡಿ.ಸೆ., ಕರಾವಳಿ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನವು 19ರಿಂದ 21 ಡಿ.ಸೆ. ಇರುವ ಹೆಚ್ಚಿನ ಸಾಧ್ಯತೆಗಳಿವೆ. ಬೆಂಗಳೂರಿನಲ್ಲಿ ಮುಂದಿನ 7 ದಿನಗಳವರೆಗೆ ಕನಿಷ್ಠ ತಾಪಮಾನ 13 ಡಿ.ಸೆ..ಯಿಂದ 15 ಡಿ.ಸೆ.ಯಷ್ಟು ಇರುವ ಸಾಧ್ಯತೆಗಳಿವೆ. ರಾಜ್ಯದ ಹಲವೆಡೆ ದಟ್ಟ ಮಂಜಿನ ವಾತಾವರಣವಿರುವ ಸಾಧ್ಯತೆಗಳಿದ್ದು, ವಿವಿಧ ವಾಹನಗಳು, ಬಸ್ಸು, ವಿಮಾನ ಹಾರಾಟಕ್ಕೆ ಅಡ್ಡಿ ಉಂಟಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಬೆಂಗಳೂರು ವಿಭಾಗದ ವಿಜ್ಞಾನಿ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.

ಎಲ್ಲೆಲ್ಲಿ ಎಷ್ಟೆಷ್ಟು ಕನಿಷ್ಠ ತಾಪಮಾನ?:

ರಾಜ್ಯದಲ್ಲಿ ಹಾಸನ ಜಿಲ್ಲೆಯಲ್ಲಿ ಬುಧವಾರ 8.1 ಡಿ.ಸೆ., ಬೆಂಗಳೂರಿನಲ್ಲಿ 15.1 ಡಿ.ಸೆ. ದಾಖಲಾಗಿದೆ. ಬೀದರ್‌ನಲ್ಲಿ 9.5, ವಿಜಯಪುರ, ಮಂಗಳೂರು 21.9, ಧಾರವಾಡ, ರಾಯಚೂರು ತಲಾ 10, ಗದಗ 11, ಹಾವೇರಿ 12.4, ಕೊಪ್ಪಳ 13.6, ದಾವಣಗೆರೆ 11.5, ಶಿವಮೊಗ್ಗ 12.2, ಮಂಡ್ಯ 12.6, ಚಿಂತಾಮಣಿ 10.6, ಮೈಸೂರು 13.2 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿದೆ.


Share with

Leave a Reply

Your email address will not be published. Required fields are marked *