ರಾಜ್ಯದ ಮಹಿಳೆಯರ & ಮಕ್ಕಳ ರಕ್ಷಣೆಗಾಗಿ ಅಕ್ಕ ಪಡೆಯನ್ನು ಸರ್ಕಾರ ರಚಿಸಿದೆ. ಈ ಅಕ್ಕ ಪಡೆಯು ನ.19 ರಿಂದ ರಾಜ್ಯದಲ್ಲಿ ಕಾರ್ಯಾರಂಭ ಮಾಡಲಿದೆ. ಇದಕ್ಕಾಗಿ ಸಹಾಯವಾಣಿ ಸಂಖ್ಯೆಯನ್ನು ಸರ್ಕಾರ ಆರಂಭಿಸಿದೆ.

ಮಹಿಳೆಯರು & ಮಕ್ಕಳ ರಕ್ಷಣೆಗಾಗಿ 1098, 181, 112ಗೆ ಕರೆ ಮಾಡಬಹುದು. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್, ಹೆಣ್ಣುಮಕ್ಕಳ ಸುರಕ್ಷತೆಗಾಗಿ ಇದೊಂದು ಕ್ರಾಂತಿಕಾರಿ ಯೋಜನೆಯಾಗಿದೆ. ಪೊಲೀಸ್ ಇಲಾಖೆ & NCC ಸಹಯೋಗದಲ್ಲಿ ಈ ಪಡೆ ಕಾರ್ಯನಿರ್ವಹಿಸಲಿದೆ ಎಂದಿದ್ದಾರೆ.




