ತಿರುವನಂತಪುರಂ: ಅಂಗನವಾಡಿಯಲ್ಲಿ ಉಪ್ಮಾ ಬದಲಿಗೆ ಬಿರಿಯಾನಿ, ಮತ್ತು ಚಿಕನ್ ಪ್ರೈ ಕೊಡಿ ಎಂಬ ಪುಟ್ಟ ಬಾಲಕನ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರ ಪರಿಣಾಮ ಇದೀಗ ಕೇರಳ ಸರಕಾರ ಅಂಗನವಾಡಿ ಕೇಂದ್ರದ ಆಹಾರದ ಮೆನು ಬದಲಾವಣೆ ಮಾಡುವ ಹಂತಕ್ಕೆ ಬಂದು ನಿಂತಿದೆ.

ಶಂಕರ ಎಂಬ ಹೆಸರಿನ ಬಾಲಕನನ್ನು ತಾಯಿ ಪ್ರೀತಿಯಿಂದ ಶಂಕು ಎಂದು ಕರೆದಿದ್ದು ಮನೆಯಲ್ಲಿ ಬಾಲಕನಿಗೆ ತಾಯಿ ಬಿರಿಯಾನಿ ತಿನ್ನಿಸುವ ವೇಳೆ ಬಾಲಕ ನನಗೆ ಅಂಗನವಾಡಿಯಲ್ಲೂ ಬಿರಿಯಾನಿ ಜೊತೆಗೆ ಚಿಕನ್ ಪ್ರೈ, ಬೇಕು ಎಂದು ಹೇಳಿದ್ದಾನೆ ಇದನ್ನು ತಾಯಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಲ್ಲದೆ ಈ ವಿಡಿಯೋ ರಾಜ್ಯ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ವೀಣಾ ಜಾರ್ಜ್ ಅವರಿಗೂ ತಲುಪಿದೆ. ಇದನ್ನು ನೋಡಿದ ಅವರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಶೇರ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.
ಸಚಿವೆ ವೀಣಾ ಜಾರ್ಜ್ ಅವರು ಸೋಮವಾರ ತಮ್ಮ ಫೇಸ್‌ಬುಕ್ ನಲ್ಲಿ ಶಂಕು ಎಂಬ ಪುಟ್ಟ ಬಾಲಕನ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಬಾಲಕ ತನ್ನ ತಾಯಿ ಜೊತೆ ಮನೆಯಲ್ಲಿ ಊಟ ಮಾಡುತ್ತಿರುವಾಗ ಹೇಳಿರುವ ಮಾತೊಂದು ಭಾರಿ ವೈರಲ್ ಆಗುತ್ತಿದೆ. ಇಲ್ಲಿ ಬಾಲಕ ತಾಯಿ ಮನೆಯಲ್ಲಿ ಬಿರಿಯಾನಿ ತಿನ್ನಿಸುತ್ತಿರುವ ವೇಳೆ ಬಾಲಕ ತಾನು ಹೋಗುತ್ತಿರುವ ಅಂಗನವಾಡಿಯಲ್ಲೂ ಉಪ್ಮ ಬದಲಿಗೆ ಬಿರಿಯಾನಿ ಮತ್ತು ಚಿಕನ್ ಪ್ರೈ ಬೇಕು ಎಂದು ಮನವಿ ಮಾಡಿಕೊಂಡಿದ್ದಾನೆ. ಈ ಪುಟ್ಟ ಬಾಲಕನ ಮನವಿ ಸಚಿವೆಯ ಮನಸ್ಸಿಗೂ ಮುಟ್ಟಿದ್ದು ಇದಕ್ಕೆ ಪ್ರತಿಕ್ರಿಯಿಸಿದ ಸಚಿವೆ ವೀಣಾ ಜಾರ್ಜ್ ಅಂಗನವಾಡಿಯ ಆಹಾರದಲ್ಲಿ ಕೆಲವೊಂದು ಬದಲಾವಣೆ ತರಲು ಈಗಾಗಲೇ ನಿರ್ಧರಿಸಲಾಗಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಈಗಾಗಲೇ ಮೊಟ್ಟೆ ಹಾಗೂ ಹಾಲು, ಚುಕ್ಕಿ ನೀಡುವ ಯೋಜನೆ ಜಾರಿಯಲ್ಲಿದೆ. ಇನ್ನೂ ಕೆಲವೊಂದು ಬದಲಾವಣೆ ತರಲು ಸರಕಾರ ಮುಂದಾಗಿದ್ದು ಶೀಘ್ರದಲ್ಲೇ ಅಂಗನವಾಡಿಯ ಮೆನುವನ್ನು ಪರಿಷ್ಕರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿಕೊಂಡಿದ್ದಾರೆ.