ಹೊಸಂಗಡಿಯಲ್ಲಿ ನೂತನ ರಸ್ತೆ ಸಂಚಾರಕ್ಕೆ ಸಿದ್ದ

Share with

ಮಂಜೇಶ್ವರ: ಹೊಸಂಗಡಿಯಲ್ಲಿ ಸುಮಾರು ಒಂದು ಕಿಲೋ ಮೀಟರ್ ವಾಹನ ಸಂಚಾರ ಕೆಳಭಾಗದಿಂದ ರಸ್ತೆ ಸಿದ್ದತೆಗೊಳ್ಳುದ್ದು, ಇದರಿಂದ ಹೊಸಂಗಡಿ ಪೇಟೆಯಲ್ಲಿ ವಾಹನಗಳ ದಟ್ಟಣೆ ಕಡಿಮೆಗೊಳುವ ಸಾದ್ಯತೆ ಕಡಿಮೆಯಾಗಬಹುದೆಂದು ಸ್ಥಳೀಯರು ಅಭಿಪ್ರಾಯಪಟ್ಟಿದೆ. ರಾಷ್ಟಿçÃಯ ಹೆದ್ದಾರಿ ಅಭಿವೃದ್ದಿ ಹಿನ್ನೆಲೆಯಲ್ಲಿ ಹೊಸಂಗಡಿ ಪೇಟೆಯಲ್ಲಿ ದಿನನಿತ್ಯ ವಾಹನಗಳ ದಟ್ಟಣೆಯಿಂದ ಸಾರ್ವಜನಿಕರು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಇಲ್ಲಿ ಕೆಳಭಾಗದಿಂದ ವಾಹನ ಸಂಚಾರಕ್ಕೆ ಕಳೆದ ಹಲವಾರು ತಿಂಗಳುಗಳ ಹಿಂದೆ ಕೆಲಸವನ್ನು ಆರಂಭಿಸಿದ್ದಾರೆ.

ಆದರೆ ಮಳೆ ಸಹಿತ ವಿವಿಧ ರೀತಿಯ ಅಡಚಣೆಯಿಂದ ಕಾಮಗಾರಿ ವಿಳಂಬಕೊಂಡಿದೆನ್ನಲಾಗಿದೆ. ಪೇಟೇಯಲ್ಲಿ ಕಿರಿದಾದ ರಸ್ತೆಯಿಂದ ಮಂಗಳೂರು-ಕಾಸರಗೋಡು ಭಾಗಕ್ಕೆ ಒಂದೇ ರಸ್ತೆಯಲ್ಲಿ ಸಂಚರಿಸುವಾಗ ವ್ಯಾಪಕವಾಗಿ ದಟ್ಟಣೆ ಉಂಟಾಗುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ, ಇದೀಗ ಕೆಳಭಾಗದಲ್ಲಿ ರಸ್ತೆ ಕಾಮಗಾರಿ ಪೂರ್ತಿಗೊಂಡಿದ್ದು, ಕೆಲವೇ ದಿನಗಳಲ್ಲಿ ಮಂಗಳೂರು ಭಾಗದಿಂದ ಕಾಸರಗೋಡಿಗೆ ವಾಹನಗಳು ಸಂಚಾರ ನಡೆಸಲಿದೆ.

ಇದರಿಂದ ಪೇಟೇಯಲ್ಲಿ ವಾಹನಗಳ ಸಂಖ್ಯೆ ಕಡಿಮೆಗೊಲ್ಲುವ ಸಾಧ್ಯತೆ ಇರುವುದರಿಂದ ಅಲ್ಪ ನೆಮ್ಮದಿಯನ್ನುಂಟುಮಾಡಲಿದೆ. ಇಕ್ಕೆಡೆಗಳಲ್ಲಿ ಸರ್ವೀಸ್ ರಸ್ತೆ ನಿರ್ಮಾಣದ ಕಾಮಗಾರಿ ಇನ್ನೂ ಬಾಕಿ ಉಳಿದುಕೊಂಡಿದ್ದು, ಶೀಘ್ರದಲ್ಲಿ ನಡೆಯಲಿದೆ.


Share with

Leave a Reply

Your email address will not be published. Required fields are marked *