ಮಂಗಳೂರು: ಅಪ್ರಾಪ್ತ ಬಾಲಕ ದ್ವಿಚಕ್ರ ವಾಹನ ಸವಾರ ಮಾಡಿದ ಆರೋಪದ ಹಿನ್ನಲೆಯಲ್ಲಿ ವಾಹನದ ಮಾಲಕಿಗೆ ಮಂಗಳೂರಿನ ನಾಲ್ಕನೆ ಜೆಎಂಎಫ್‌ಸಿ ನ್ಯಾಯಾಲಯವು ₹26,000 ದಂಡ ವಿಧಿಸಿದೆ.
ಅಕ್ಟೋಬರ್ 10ರಂದು ಬೈಕಂಪಾಡಿ ಪ್ರದೇಶದಲ್ಲಿ ಅತಿಜಮ್ಮರ ಅಪ್ರಾಪ್ತ ವಯಸ್ಸಿನ ಪುತ್ರ ದ್ವಿಚಕ್ರ ವಾಹನವನ್ನು ಚಲಾಯಿಸುತ್ತಿದ್ದ ವೇಳೆ ಪೊಲೀಸರು ಪತ್ತೆ ಹಚ್ಚಿದ್ದರು.
ಈ ಸಂಬಂಧ ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಬಳಿಕ ನ್ಯಾಯಾಲಯವು ಅಪ್ರಾಪ್ತ ಬಾಲಕನಿಗೆ ವಾಹನ ಚಲಾಯಿಸಲು ಅವಕಾಶ ನೀಡಿದ ಕಾರಣಕ್ಕೆ ವಾಹನದ ಮಾಲಕಿಗೆ ದಂಡ ವಿಧಿಸಿದೆ.





