
ಮಂಗಳೂರು: ತುಳುನಾಡಿನ ಜಾನಪದ ಕ್ರೀಡೆಗಳಲ್ಲೊಂದಾದ ಕಂಬಳ ಸೀಸನ್ ಈಗ ನಡೆಯುತ್ತಿದೆ. ಪ್ರತೀ ವೀಕೆಂಡ್‌ಗಳಲ್ಲಿ ಒಂದೊಂದು ಊರಿನಲ್ಲಿ ಕಂಬಳ ನಡೆಯುತ್ತಿದ್ದು, ಈ ವಾರ ಸುರತ್ಕಲ್ ಸಮೀಪದ ಗುರುಪುರದಲ್ಲಿ ಕಂಬಳ ಆಯೋಜನೆ ಮಾಡಲಾಗಿದೆ.

ಕಂಬಳ ಓಟದ ವೇಳೆ ಕೋಣಗಳಿಗೆ ಕಟ್ಟಿದ್ದ ನೇಗಿಲು ಜಾರಿ ಕೆಳಗೆ ಬಿದ್ದರೂ ಓಟಗಾರನಿಲ್ಲದೆಯೇ ಕೋಣಗಳು ಗುರಿ ತಲುಪಿ ಇತಿಹಾಸ ಸೃಷ್ಟಿಸಿವೆ.
ಗುರುಪುರದಲ್ಲಿ ನಿನ್ನೆ ನಡೆದ ಮೂಳೂರು-ಅಡ್ಡೂರು ಜೋಡುಕರೆ ಕಂಬಳ ಕ್ರೀಡೆಯಲ್ಲಿ ಮಾಣಿ ಸಾಗು ಮನೆ (ಎ) ಮತ್ತು ಹೊಸ್ಮಾರ್ ಸೂರ್ಯಶ್ರೀ (ಬಿ) ತಂಡದ ಮಧ್ಯೆ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯ ನಡೆಯಿತು. ಈ ವೇಳೆ ಹೊಸ್ಮಾರ್ ಸೂರ್ಯಶ್ರೀ ತಂಡದ ಕೋಣಗಳಾದ ಕೃಷ್ಣಾಪುರ ನಡುಮನೆ ಪರಮೇಶ್ವರ್ ಸಾಲ್ಯಾನ್ ಅವರ ಕಿಂಗ್ ಕೆಪಿ ಬೊಲ್ಲೆ ಮತ್ತು ಹೊಸ್ಮಾರ್ ಸೂರ್ಯಶ್ರೀ ತಂಡದ ಬಾರ್ಗಿ ಕೋಣಗಳು ಓಟಗಾರನಿಲ್ಲದೆಯೇ ಗುರಿ ತಲುಪಿ ಮುಂದಿನ ಹಂತಕ್ಕೆ ತೇರ್ಗಡೆಗೊಂಡವು




