ಶಾಲೆಯ ಕಾರ್ಯಕ್ರಮಗಳು ಊರಿಗೊಂದು ಹೆಮ್ಮೆ ಪಡುವಂತಹ ವಿಚಾರವಾಗಿದೆ

Share with



ಬಂಟ್ವಾಳ : ಶಾಲೆಯಲ್ಲಿ ನಡೆಯುವ ಕಾರ್ಯಕ್ರಮಗಳು ಊರಿಗೊಂದು ಹೆಮ್ಮೆ ಪಡುವಂತಹ ವಿಚಾರವಾಗಿದೆ.  ವಿದ್ಯಾರ್ಥಿಗಳಲ್ಲಿ ಕಲಿಕೆಯ ಜೊತೆಗೆ ಪಠ್ಯೇತರವಾಗಿ ಚಟುವಟಿಕೆಗಳನ್ನು ರೂಪಿಸಿದಾಗ ಕಲಿಕೆಯಲ್ಲಿ ಆಸಕ್ತಿ ಮೂಡುತ್ತದೆ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕುವಲು ಇಂತಹ ವೇದಿಕೆಗಳು ಸಹಕಾರಿಯಾಗಿದೆ, ಸಂಪನ್ಮೂಲಗಳ ಕ್ರೋಡೀಕರಣದಿಂದಾಗಿ ಶಾಲೆಯು ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ ಎಂದು ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಇಬ್ರಾಹಿಂ ಕೆ ಹೇಳಿದರು.

ಅವರು ಶಾಲಾ ಶಿಕ್ಷಣ ಇಲಾಖೆ, ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ,  ಶಾಲಾಭಿವೃದ್ದಿ  ಸಮಿತಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ  ಮಾಣಿ  ಆಶ್ರಯದಲ್ಲಿ ಬಂಟ್ವಾಳ ತಾಲೂಕಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಾಣಿ ಯಲ್ಲಿ ಜರಗಿದ ಕಲ್ಲಡ್ಕ ವಲಯ ಮಟ್ಟದ ಪ್ರತಿಭಾ ಕಾರಂಜಿ -2024  ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ದಾನಿಗಳಾದ ಶ್ರೀಮತಿ ಪ್ರಪುಲ್ಲ ರೈ  ತಮ್ಮ ಉದ್ಘಾಟನಾ ಮಾತುಗಳಲ್ಲಿ ವಿದ್ಯಾದಾನ ಶ್ರೇಷ್ಠದಾನವಾಗಿದೆ ತಮ್ಮ ಜೀವನದಲ್ಲಿ ನಾವು ಗಳಿಸಿದ ಸಂಪತ್ತಿನಲ್ಲಿ ಸ್ವಲ್ಪ ಭಾಗ ಸೇವೆಗೆಂದು ಮೀಸಲಿಡಬೇಕು ಕೈಲಾದ ಮಟ್ಟಿಗೆ ಕೊಡುಗೆಗಳನ್ನು ನೀಡಿ ಸಹಕರಿಸಬೇಕು ಇದರಿಂದ ನೆಮ್ಮದಿ ಉಂಟಾಗುತ್ತದೆ ಜೀವನದ ಮೌಲ್ಯವು ಹೆಚ್ಚುತ್ತದೆ ಎಂದು ತಿಳಿಸಿದರು.

ಮಾಣಿ ಗ್ರಾಮ ಪಂಚಾಯಿತಿನ   ಮಾಜಿ ಅಧ್ಯಕ್ಷ, ಪ್ರಸ್ತುತ ಸದಸ್ಯರಾದ ಬಾಲಕೃಷ್ಣ ಆಳ್ವ ಕೊಡಾಜೆ ಮಾತನಾಡಿ ಪ್ರತಿ ಶಾಲೆಗಳು ವರ್ಷಕ್ಕೆ ಒಂದು ಬಾರಿಯಾದರೂ ಇಲಾಖೆಯ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಿರ್ವಹಿಸಬೇಕು, ಆಗ ಸಮುದಾಯದ ಜೊತೆಗಿನ ಸಂಬಂಧ ಗಟ್ಟಿಗೊಳ್ಳುತ್ತದೆ. ಜಗತ್ತಿನ ಶ್ರೇಷ್ಠ ಸಂಪತ್ತು ಮಾನವನಿಲ್ಲಿದೆ ಮಕ್ಕಳನ್ನು ಉತ್ತಮರನ್ನಾಗಿ ರೂಪಿಗೊಳಿಸುವ ಮಹತ್ತರ ಜವಾಬ್ದಾರಿ ಶಿಕ್ಷಕನಲ್ಲಿದೆ ಎಂದರು.
      
ಪ್ರತಿಭಾ ಕಾರಂಜಿಯಲ್ಲಿ ಜರಗುವಂತಹ ಸ್ಪರ್ಧೆಗಳು ಮಕ್ಕಳಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ಉಂಟುಮಾಡುತ್ತದೆ ಮಕ್ಕಳಲ್ಲಿರುವ ಸಾಮರ್ಥ್ಯವನ್ನು ಹೊರತರಲು ಅವರ ಪ್ರತಿಭೆಯನ್ನು ಗುರುತಿಸಲು ಒಂದು ಅವಕಾಶವನ್ನು ಕಲ್ಪಿಸುವಂತಹ ಕಾರ್ಯಕ್ರಮವಾಗಿದೆ, ಸೋತಾಗ ಕುಗ್ಗದೆ ಗೆದ್ದಾಗ ಹಿಗ್ಗದೆ ಸಮಾನವಾಗಿ ಸ್ವೀಕರಿಸಿ ಸ್ಪರ್ಧಾ ಮನೋಭಾವನೆ ಬೆಳೆಯುವುದು ಶಿಕ್ಷಣದ ಒಂದು ಮುಖ್ಯ ಅಂಗವಾಗಿದೆ ಎಂಬುದಾಗಿ ಬಂಟ್ವಾಳ ತಾಲೂಕಿನ ಶಿಕ್ಷಣ ಸಂಯೋಜಕೀಯಾದ ಸುಧಾ  ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ತಿಳಿಸಿದರು.

ಪ್ರಥಮ ದ್ವಿತೀಯ ತೃತೀಯ ಎನ್ನುವಂತ ಸ್ಥಾನಗಳು ಸ್ಪರ್ಧೆಗಳಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುವ ಒಂದು ಅಂಕಿ ಅಷ್ಟೇ, ಮಕ್ಕಳ ಪ್ರತಿಭೆಯನ್ನು ಗುರುತಿಸಲು ಪ್ರತಿಭಾ ಕಾರಂಜಿಯ ವೇದಿಕೆಯು ಒಂದು ಉತ್ತಮ ನಿದರ್ಶನವಾಗಿದೆ ಶಿಕ್ಷಣವು ನಿಂತ ನೀರಲ್ಲ ಬದಲಾವಣೆಗೆ ಸ್ಪಂದಿಸುತ್ತಾ ಆಧುನಿಕ ಯುಗದಲ್ಲಿ ಶಿಕ್ಷಣದಲ್ಲಿ ಹಲವಾರು ಪ್ರಯೋಗಗಳು ಉಂಟಾಗಿವೆ ಇದರಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತವೆ ಎಂಬುದಾಗಿ ಸರಕಾರಿ ನೌಕರರ ಸಂಘದ ಕಾರ್ಯದರ್ಶಿಯಾದ ಸಂತೋಷ ಕುಮಾರ್ ಹೇಳಿದರು.

ಕಲ್ಲಡ್ಕ ವಲಯದ ವಿವಿಧ ಶಾಲೆ ಗಳಿಂದ ಸುಮಾರು 450 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆ ಯಲ್ಲಿ ಭಾಗವಹಿಸಿದ್ದರು.

ಮಾಣಿ ಬಾಲವಿಕಾಸ ಶಾಲೆ ಪ್ರಥಮ ಸಮಗ್ರ ಪ್ರಶಸ್ತಿ, ಕಲ್ಲಡ್ಕ ಶ್ರೀರಾಮ ಶಾಲೆ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡವು.

ಕಾರ್ಯಕ್ರಮದಲ್ಲಿ ಮಾಣಿ ಗ್ರಾಮ ಪಂಚಾಯತಿನ ಉಪಾಧ್ಯಕ್ಷರಾದ ಸುಜಾತ, ಸದಸ್ಯರಾದ ಮೆಲ್ವಿನ್ ಕಿಶೋರ್ ಮಾರ್ಟಿಸ್ ಕೊಡಾಜೆ, ಪ್ರೀತಿ ಡಿನ್ನಪಿರೇರಾ, ಸುದೀಪ್ ಶೆಟ್ಟಿ, ನಾರಾಯಣಶೆಟ್ಟಿ, ರಮಣಿ, ಸೀತಾ, ಮಿತ್ರಾಕ್ಷಿ, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಕುಶಾಲಪ್ಪಗೌಡ, ಉಪಾಧ್ಯಕ್ಷೆಯದ ಆಶಾಲತಾ,  ಬಂಟ್ವಾಳ ತಾಲೂಕು ಶಿಕ್ಷಣ ಸಂಯೋಜಕಿಯಾದ ಪ್ರತಿಮಾ, ಮಾಣಿ ಮತ್ತು ಬಾಳ್ತಿಲ ಸಮೂಹ ಸಂಪನ್ಮೂಲ ವ್ಯಕ್ತಿ ಸತೀಶ್ ರಾವ್, ಕಡೆ ಶಿವಾಲಯ ಸಮೂಹ ಸಂಪನ್ಮೂಲ ವ್ಯಕ್ತಿ ಸುಧಾಕರ್, ಮುಖ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ ಪುಟ್ಟರಂಗನಾಥ್, ಪ್ರೌಢಶಾಲಾ ಶಿಕ್ಷಕರ ಸಂಘದ ಕೋಶಾಧಿಕಾರಿ  ಧನರಾಜ್, ಪಾಟ್ರಕೋಡಿ ಶಾಲೆಯ ಮುಖ್ಯ ಶಿಕ್ಷಕ ಉಮ್ಮರಗಿ ಶರಣಪ್ಪ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ವಿಟ್ಲ, ಪ್ರತಿಭಾ ಕಾರಂಜಿ ವಲಯ ನೋಡೆಲ್ ಕಲ್ಲಡ್ಕ ಮಾದರಿ ಶಾಲೆಯ ಪದವೀಧರ ಮುಖ್ಯ ಶಿಕ್ಷಕ ಅಶ್ರಫ್,ಮಾಣಿ ಶಾಲಾ ಮುಖ್ಯ ಶಿಕ್ಷಕಿ ಚಂದ್ರಾವತಿ,  ಎಸ್.ಡಿ.ಎಮ್.ಸಿ ಸದಸ್ಯರು ಶಿಕ್ಷಕರು ಉಪಸ್ಥಿತರಿದ್ದರು.


   ಶಿಕ್ಷಕಿ ಅಮೃತ ಸ್ವಾಗತಿಸಿ, ಶಿಕ್ಷಕಿ ಶೀಲಾವತಿ ವಂದಿಸಿ,ನಾಯಿಲ ಶಾಲಾ ಶಿಕ್ಷಕ ಡಿಕ್ಸ ನ್  ಹಾಗೂ ಮಜಿ ಶಾಲಾ ಶಿಕ್ಷಕಿ ಸಂಗೀತ ಶರ್ಮಾ ಕಾರ್ಯಕ್ರಮ ನೀರೂಪಿಸಿದರು.


Share with

Leave a Reply

Your email address will not be published. Required fields are marked *