
ಸೋರೆಕಾಯಿಯಲ್ಲಿ ಕಡಿಮೆ ಕ್ಯಾಲೋರಿ ಇದೆ. 100 ಗ್ರಾಂ ಕುಂಬಳಕಾಯಿ ಕೇವಲ 13 ಕ್ಯಾಲೊರಿಗಳನ್ನು ಹೊಂದಿರುತ್ತದೆ. ಅಲ್ಲದೇ ಇದರಲ್ಲಿ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ ತುಂಬಾ ಕಡಿಮೆ ಇರುವುದರಿಂದ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ತುಂಬಾ ಸಹಕಾರಿ.
- ಕುಂಬಳಕಾಯಿಯಲ್ಲಿರುವ ಫೈಬರ್ ದೇಹದ ತೂಕವನ್ನು ಇಳಿಸುತ್ತದೆ.
- ಕುಂಬಳಕಾಯಿಯಲ್ಲಿ ಆ್ಯಂಟಿ ಆಕ್ಸಿಡೆಂಟ್‌ಗಳಿದ್ದು, ದೀರ್ಘಕಾಲದ ರೋಗವನ್ನು ತಡೆಯುತ್ತದೆ.
- ಇದರಲ್ಲಿ ವಿಟಮಿನ್ ‘ಎ’ ಇರುವ ಕಾರಣ ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು.
- ಕುಂಬಳಕಾಯಿಯಲ್ಲಿ ಆಲ್ಫಾ & ಬೀಟಾ ಕಾರಟಿನ್ ಅಂಶಗಳಿದ್ದು, ಕ್ಯಾನ್ಸರ್ ನಿಯಂತ್ರಣಕ್ಕೆ ಸಹಕಾರಿಯಾಗಿದೆ.
- ಇದು ಹೃದಯದ ಆರೋಗ್ಯಕ್ಕೂ ಒಳ್ಳೆಯದು ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯವಾಗಿದೆ.