ತೊದಲುವಿಕೆ ಸಮಸ್ಯೆಗೆ ಈ ಚಿಕಿತ್ಸೆಯಲ್ಲಿದೆ ಪರಿಹಾರ

Share with

ಸಣ್ಣ ಮಕ್ಕಳು ತೊದಲು ಮಾತನಾಡುವುದನ್ನು ಕೇಳುವುದೇ ಕಿವಿಗೆ ಇಂಪು. ಅದೇ ದೊಡ್ಡವರೇನಾದರೂ ಮಾತಿನ ನಡುವೆ ತೊದಲುತ್ತಿದ್ದರೆ ಗೇಲಿ ಮಾಡುವವರೇ ಹೆಚ್ಚು. ಈ ತೊದಲುವಿಕೆ ಎಂದು ಕರೆಯಲಾಗುವ ಮಾತಿನ ಉಗ್ಗು, ಬಾಲ್ಯದಲ್ಲಿಯೇ ಅಂಟಿಕೊಳ್ಳುವ ಒಂದು ಅಸ್ವಸ್ಥತೆಯಾಗಿದೆ. ಇದು ಮಕ್ಕಳ ಭಾವನೆಗಳ ಸರಾಗ ಹರಿವಿಗೆ ಸಮಸ್ಯೆ ಉಂಟುಮಾಡುತ್ತದೆ. ಮಕ್ಕಳು ಬೆಳೆಯುತ್ತ ಹೋದಂತೆ ಮಾತಿನ ನಡುವೆ ತೊದಲುತ್ತಿದ್ದರೆ ಪೋಷಕರು ಇದನ್ನು ತಿದ್ದುವ ಪ್ರಯತ್ನ ಅಥವಾ ಸರಿಯಾದ ಚಿಕಿತ್ಸೆ ಕೊಡಿಸುವುದು ಬಹಳ ಮುಖ್ಯ. ಇದೇ ಅಭ್ಯಾಸವಾಗಿ ಬಿಟ್ಟರೆ ಆ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಸಾಕಷ್ಟು ಅವಮಾನಗಳನ್ನು ಅನುಭವಿಸುವ ಸಾಧ್ಯತೆಯೇ ಹೆಚ್ಚು. ಸಮಾಜವು ಆ ವ್ಯಕ್ತಿಗಳು ಮಾತನಾಡುವ ರೀತಿಗೆ ತಮಾಷೆ ಮಾಡಬಹುದು, ಇದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ತೊದಲುವಿಕೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಅಕ್ಟೋಬರ್ 22 ರಂದು ಅಂತಾರಾಷ್ಟ್ರೀಯ ತೊದಲುವಿಕೆ ಜಾಗೃತಿ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ತೊದಲುವಿಕೆಗೆ ಚಿಕಿತ್ಸೆ ಏನು?
ತೊದಲುವಿಕೆಗೆ ಚಿಕಿತ್ಸೆ ನೀಡಲು ಎರಡು ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಇವುಗಳಲ್ಲಿ ಮೊದಲನೆಯದು ಸ್ಪೀಚ್ ಥೆರಪಿ, ಇದರಲ್ಲಿ ವೈದ್ಯರು ಮಾತನಾಡುವ ವೇಗವನ್ನು ಕಡಿಮೆ ಮಾಡುವ ಬಗ್ಗೆ ಮಾತನಾಡುತ್ತಾರೆ. ಇದಲ್ಲದೆ, ವ್ಯಕ್ತಿಯು ಯಾವ ನಿರ್ದಿಷ್ಟ ಪದದಲ್ಲಿ ಸಿಲುಕಿಕೊಳ್ಳುತ್ತಾನೆ ಎಂಬುದರ ಬಗ್ಗೆಯೂ ಗಮನ ನೀಡಲಾಗುತ್ತದೆ. ಅದಲ್ಲದೇ, ಇನ್ನೊಂದು ಅರಿವಿನ ವರ್ತನೆಯ ಚಿಕಿತ್ಸೆಯಾಗಿದ್ದು, ಇದು ವ್ಯಕ್ತಿಯ ಮಾತನಾಡುವ ಶಕ್ತಿ ಮತ್ತು ನಡವಳಿಕೆಯನ್ನು ಸುಧಾರಿಸುವ ಮಾನಸಿಕ ಚಿಕಿತ್ಸೆಯಾಗಿದೆ.

ತೊದಲುವಿಕೆ ಸಮಸ್ಯೆ ನಿವಾರಣೆಗೆ ವ್ಯಾಯಾಮಗಳಿವು

  • ಶಾರೀರಿಕ ಕಾರಣಗಳಿಂದ ಉಂಟಾಗುವ ತೊದಲುವಿಕೆಗೆ ಕೆಳಗಿನ ವ್ಯಾಯಾಮಗಳು ಪರಿಣಾಮಕಾರಿಯಾಗಿದೆ. ಹೀಗಾಗಿ ಈ ಉಚ್ಚಾರಣಾ ಸ್ವರಕ್ಕೆ ಅನುಗುಣವಾಗಿ ಪ್ರತಿ ಬಾರಿ ಮುಖದ ಸ್ನಾಯುಗಳನ್ನು ವಿರೂಪಗೊಳಿಸಿ, ಸಾಧ್ಯವಾದಷ್ಟು ಅಭಿವ್ಯಕ್ತಿ ಶಬ್ದಗಳನ್ನು ಉಚ್ಚರಿಸಲು ಪ್ರಯತ್ನಿಸುವುದು ಉತ್ತಮ.
  • ವೇಗವಾಗಿ ಓದುವ ಅಭ್ಯಾಸ ಬೆಳೆಸಿಕೊಳ್ಳಿ. ಇಲ್ಲಿ ಪದಗಳನ್ನು ತಪ್ಪಾಗಿ ಉಚ್ಚರಿಸಲು ನಿಮ್ಮನ್ನು ಅನುಮತಿಸದಿರಿ ಮತ್ತು ಯಾವುದೇ ಪದ ಅಥವಾ ಉಚ್ಚಾರಾಂಶದಲ್ಲಿ ನಿಲ್ಲಬೇಡಿ. ಎರಡು ಮೂರು ತಿಂಗಳುಗಳವರೆಗೆ ಇದನ್ನು ಪುನರಾವರ್ತಿಸಿದರೆ, ಈ ವ್ಯಾಯಾಮವು ಸ್ನಾಯುವಿನ ಒತ್ತಡವನ್ನು ನಿವಾರಿಸಲು ಮತ್ತು ಮಾತಿನಲ್ಲಿ ಉಂಟಾಗುವ ಅಡಚಣೆಗಳನ್ನು ಸರಿಪಡಿಸುತ್ತದೆ.

Share with

Leave a Reply

Your email address will not be published. Required fields are marked *