ಮಂಜೇಶ್ವರ: ಕಕ್ಕುಸ್‌ನ ಮಲಿನ ಜಲವನ್ನು ಟ್ಯಾಂಕರ್ ಲಾರಿಯಲ್ಲಿ ಉಪೇಕ್ಷಿಸಲು ತಲುಪಿದಾಗ ಊರವರು ತಡೆಯೊಡ್ಡಿ ಪೋಲೀಸರಿಗೆ ನೀಡಿದ್ದಾರೆ. ಮೊರತ್ತಣೆ ಬಳಿಯ ಬಟ್ಯಪದವುನಲ್ಲಿ. ಭಾನುವಾರ ಮುಂಜಾನೆ ೩ಗಂಟೆಗೆ ಘಟನೆ ನಡೇದಿದೆ. ಟ್ಯಾಂಕರ್ ಮೂಲಕ ಮಲಿನ ಜಲ ತಂದು ಕಲ್ಲಿನ ಕೋರೆಯ ಹೊಂಡಕ್ಕೆ ಉಪೇಕ್ಷಿಸಲು ಯತ್ನಿಸುತಿದ್ದ ವೇಳೆ ಊರವರ ಗಮನಕ್ಕೆ ಬಂದು ತಡಯೊಡ್ಡಿದ್ದಾರೆ. ಬಳಿಕ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಮಂಜೇಶ್ವರ ಠಾಣೆಯ ಸಿ.ಐ ಕೆ. ರಾಜೀವ್ ಕುಮಾರ್ ನೇತೄತ್ವದ ಪೋಲೀಸರು ತಲುಪಿ ಟ್ಯಾಂಕರ್ ಲಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಸಂಬAಧ ಚಾಲಕ ಸುಬ್ಬಯ್ಯಕಟ್ಟೆ ನಿವಾಸಿ ಅಬ್ದುಲ್‌ರಹಿಮಾನ್ [೩೪] ಎಂಬಾತನ ವಿರುದ್ದ ಕೇಸು ದಾಖಲಿಸಿದ್ದಾರೆ.