ಗಂಗಾವತಿ: ಹಳಿಯ ಮೇಲೆ ಕುಳಿತು ಮದ್ಯ ಸೇವನೆ ಮಾಡುತ್ತಿದ್ದ ಮೂವರು ಯುವಕರ ಮೇಲೆ ರೈಲು ಹರಿದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ಗಂಗಾವತಿಯ ಕನಕಗಿರಿ ರಸ್ತೆಯ ರೈಲ್ವೇ ಮಾರ್ಗದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.
ಮೃತರನ್ನು ಗಂಗಾವತಿಯ ಮೌನೇಶ (23), ಸುನೀಲ್ ಕುಮಾರ(23), ವೆಂಕಟ್ (20) ಎನ್ನಲಾಗಿದ್ದು ಈ ಮೂವರು ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಕನಕಗಿರಿ ರಸ್ತೆಯಲ್ಲಿರುವ ರೈಲ್ವೇ ಹಳಿ ಮೇಲೆ ಕುಳಿತು ಮದ್ಯ ಸೇವನೆ ಮಾಡುತ್ತಿದ್ದರು ಎನ್ನಲಾಗಿದೆ ಈ ಸಂದರ್ಭದಲ್ಲಿ ಹುಬ್ಬಳ್ಳಿ ಕಡೆಯಿಂದ ಆಗಮಿಸಿದ ರೈಲು ಮೂವರ ಮೇಲೆಯೇ ಹರಿದಿದ್ದು ಪರಿಣಾಮ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳದಲ್ಲಿ ಮದ್ಯದ ಬಾಟಲಿ, ಮೊಬೈಲ್ ಹಾಗೂ ಕೆಲವು ತಿಂಡಿ ಪಾಕೇಟ್ ಗಳಿದ್ದು ಸ್ಥಳಕ್ಕೆ ರೈಲ್ವೇ ಇಲಾಖೆಯ ಪಿಎಸ್ಐ ಬಿ.ಎನ್.ರಾಮಣ್ಣ ನೇತೃತ್ವದ ರೈಲ್ವೇ ಪೊಲೀಸ್ ತಂಡ ಭೇಟಿ ನೀಡಿ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.